ಮಂಗಳೂರು: ಆ. 26ರಂದು ವಿದ್ಯುತ್ ಸಂಪರ್ಕ ಕಡಿತ
ಮಂಗಳೂರು, ಆ.24: ಬಿಜೈ ಉಪಕೇಂದ್ರದಿಂದ ಹೊರಡುವ 11 ಕೆ. ಬಿಜೈ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಆ.26ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಬಿಜೈ ಮೈನ್ ರೋಡ್, ಪಂಚಮಿ ಕಾಂಪ್ಲೆಕ್ಸ್, ಬಿಜೈ ನ್ಯೂರೋಡ್, ಆನೆಗುಂಡಿ, ಎಂಸಿಎಫ್ ಕಾಲನಿ, ಬಿಜೈ ಚರ್ಚ್‌ರೋಡ್, ಸಂಕೈಗುಡ್ಡ, ಗ್ಯಾಸ್ ಗೋಡಾನ್, ಬಟ್ಟಗುಡ್ಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಮಂಗಳೂರು ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಮಾಡಲಿರುವುದರಿಂದ ಆ.26ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬಂದರ್, ಪೊಲೀಸ್ ಠಾಣೆ, ಗಾಂಧಿಸನ್ಸ್, ಅಜೀಜುದ್ದೀನ್ ರಸ್ತೆ, ಜೆಎಂ ರಸ್ತೆ, ಚೇಂಬರ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





