ಮಲ್ಲಾರಿನ ವ್ಯಕ್ತಿಯ ಸಂಶಯಾಸ್ಪದ ಸಾವು: ದೂರು
ಕಾಪು, ಆ.24: ಉದ್ಯಾವರದ ಬೊಳ್ಜೆ ಪಾಪನಾಶಿನಿ ಹೊಳೆಯ ರೈಲ್ವೆ ಸೇತುವೆ ಬಳಿ ಮಲ್ಲಾರಿನ ವ್ಯಕ್ತಿಯೊಬ್ಬರ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಮಲ್ಲಾರು ಗ್ರಾಮದ ಕನ್ನಡ ಶಾಲೆ ಹತ್ತಿರ ನಿವಾಸಿ ಉಬೇದುಲ್ಲಾ ಯಾನೆ ಮೊಹಮ್ಮದ್ ಖಾಸಿಂ(59) ಎಂದು ಗುರುತಿಸಲಾಗಿದೆ. ಗ್ಯಾರೇಜ್ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಆ.23ರಂದು ಮನೆಯಿಂದ ಬೈಕಿನಲ್ಲಿ ಉಡುಪಿಗೆ ತೆರಳಿದ್ದರು. ಸಂಜೆ 7:30ರ ಸುಮಾರಿಗೆ ಮಗಳು ಕರೆ ಮಾಡಿದಾಗ ಮನೆಗೆ ಈಗ ಬರುವುದಾಗಿ ಹೇಳಿದ ಖಾಸಿಂ ಅವರ ಮೊಬೈಲ್ ರಾತ್ರಿ 8ಗಂಟೆ ಸುಮಾರಿಗೆ ಸ್ವಿಚ್‌ಆಫ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆ.24ರಂದು ಬೆಳಿಗ್ಗೆ ಇವರ ಮೃತದೇಹವು ಉದ್ಯಾವರದ ಬೊಳ್ಜೆ ಪಾಪ ನಾಶಿನಿ ಹೊಳೆಯ ರೈಲ್ವೆ ಸೇತುವೆ ಬಳಳಿ ಪತ್ತೆಯಾಗಿದೆ. ಮೃತದೇಹದ ಬಲಬದಿ ಹಣೆಯ ಸಮೀಪ ತರಚಿದ ಗಾಯಗಳು ಕಂಡುಬಂದಿದೆ ಎಂದು ದೂರ ಲಾಗಿದೆ. ಇವರು ಆ.23ರಂದು ರಾತ್ರಿ ವೇಳೆ ಮೃತಪಟ್ಟಿರುವ ಸಾಧ್ಯತೆ ಇದ್ದು ಮೃತರ ಮರಣದಲ್ಲಿ ಸಂಶಯವಿರುವುದಾಗಿ ಮಗಳು ಆಫ್ರೀನ್ ಬಾನು ದೂರಿನಲ್ಲಿ ತಿಳಿಸಿದ್ದಾರೆ.





