ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬವೇ ಸೂಕ್ತ : ಜನಾರ್ಧನ ಪೂಜಾರಿ
ಮಂಗಳೂರು, ಆ. 24: ಇಂದಿನ ಈ ಕ್ಲಿಷ್ಟ ಸಮಯದಲ್ಲಿ ಕಾಂಗ್ರೆಸಿಗೆ ನಾಯಕತ್ವ ನೀಡಲು ಗಾಂಧಿ ಕುಟುಂಬವೇ ಸೂಕ್ತ. ಈ ಹಿಂದೆ ಅನೇಕ ಬಾರಿ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಯಾವುದೇ ರೀತಿಯಲ್ಲಿ ದೃತಿಗೆಡದೆ ಗಾಂಧಿ ಕುಟುಂಬದ ಸದಸ್ಯರೇ ಮುನ್ನೆಡೆಸಿದ್ದರು. ಗಾಂಧಿ ಕುಟುಂಬದ ಹಿರಿಯರು ದೇಶಕ್ಕಾಗಿ ಅಪಾರವಾದ ತ್ಯಾಗ, ಬಲಿದಾನ ಮಾಡಿದ್ದಾರೆ.
ಅವರು ತಮ್ಮ ಸರ್ವಸ್ವವನ್ನು ದೇಶಕ್ಕಾಗಿ ಅರ್ಪಣೆ ಮಾಡಿದ್ದು ಇತಿಹಾಸ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಕಟ್ಟುವಲ್ಲಿಯೂ ಗಾಂಧಿ ಕುಟುಂಬದ ಪಾತ್ರ ಅಪಾರವಾಗಿದೆ. ಆದ್ದರಿಂದ ಎಐಸಿಸಿ ಹೊಣೆಗಾರಿಕೆಯನ್ನು ಗಾಂಧಿ ಕುಟುಂಬದವರೇ ವಹಿಸಿಕೊಳ್ಳುವುದು ಸೂಕ್ತ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ. ಜನಾರ್ಧನ ಪೂಜಾರಿಯವರು ಹೇಳಿದ್ದಾರೆ.
Next Story





