ಬಂದೂಕುಗಳನ್ನು ಹಿಡಿದು ನೃತ್ಯ ಮಾಡಿದ್ದ ಶಾಸಕನ ಅಮಾನತನ್ನು ಹಿಂಪಡೆದ ಬಿಜೆಪಿ

ಹೊಸದಿಲ್ಲಿ: 13 ತಿಂಗಳ ನಂತರ ವಿವಾದಾತ್ಮಕ ಶಾಸಕ ಕುನ್ವಾರ್ ಪ್ರಣವ್ ಸಿಂಗ್ ಚಾಂಪಿಯನ್ ವಿರುದ್ಧದ ಅಮಾನತು ಆದೇಶವನ್ನು ಬಿಜೆಪಿ ಹಿಂದಕ್ಕೆ ಪಡೆದಿದೆ. ಪ್ರಣವ್ ಸಿಂಗ್ ಬಂದೂಕುಗಳನ್ನು ಹಿಡಿದು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು.
ಆದರೆ ಇದೀಗ 13 ತಿಂಗಳ ಕಾಲಾವಧಿಯಲ್ಲಿ ಅವರ ‘ಸನ್ನಡತೆ’ ಮತ್ತು ಸತತ ಕ್ಷಮೆಯಾಚನೆಯ ಕಾರಣದಿಂದಾಗಿ ಪಕ್ಷವು ಅವರ ಮೇಲಿನ ಅಮಾನತು ಆದೇಶವನ್ನು ರದ್ದುಗೊಳಿಸಿದೆ ಎಂದು ಉತ್ತರಾಖಂಡ ಬಿಜೆಪಿ ಮುಖ್ಯಸ್ಥ ಬಂಸಿಧರ್ ಭಗತ್ ತಿಳಿಸಿದ್ದಾರೆ.
ಶಾಸಕರು ತನ್ನೊಂದಿಗೆ, ಪಕ್ಷದ ಕೋರ್ ಕಮಿಟಿ ಮತ್ತು ಮಾಧ್ಯಮದವರಲ್ಲಿ ಕ್ಷಮೆ ಯಾಚಿಸಿದ್ದಾರೆ ಎಂದು ಭಗತ್ ಹೇಳಿದ್ದಾರೆ.
Next Story





