ಹರೇಕಳ: ಸಿರಾಜುಲ್ ಹುದಾ ದರ್ಸ್ ಮುರ್ಶಿದುಲ್ ಅನಾಮ್ ಸಾಹಿತ್ಯ ವೇದಿಕೆಯ ವಾರ್ಷಿಕ ಸಭೆ
ಮಂಗಳೂರು, ಆ.22: ಹರೇಕಳ ಆಲಡ್ಕದ ಸಿರಾಜುಲ್ ಹುದಾ ದರ್ಸ್ ಮುರ್ಶಿದುಲ್ ಅನಾಮ್ ಸಾಹಿತ್ಯ ವೇದಿಕೆಯ ವಾರ್ಷಿಕ ಸಭೆಯೂ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎಂ.ಅಬ್ದುಲ್ ಸಲಾಂ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಕೆ.ಎಂ.ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭ ನೂತನ ಕಮಿಟಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೆ.ಎಂ.ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಅಧ್ಯಕ್ಷರಾಗಿ ಮುಹಮ್ಮದ್ ಶಾಕಿರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸುಹೈಲ್, ಕೋಶಾಧಿಕಾರಿ ಎಂ.ಅಬ್ದುಲ್ ಸಲಾಂ, ಉಪಾಧ್ಯಕ್ಷ ಮುಹಮ್ಮದ್ ಸಾಬಿತ್, ಕಾರ್ಯದರ್ಶಿ ಮುಹಮ್ಮದ್ ಅಫ್ನಾನ್ ಹಾಗೂ ಸದಸ್ಯರುಗಳಾಗಿ ಮುಹಮ್ಮದ್ ಅನ್ಸಾರ್, ಮುಹಮ್ಮದ್ ಶಾಹಿದ್, ಮುಹಮ್ಮದ್ ಇರ್ಷಾದ್, ಮುಹಮ್ಮದ್ ಸಿಮಾಕ್, ಮುಹಮ್ಮದ್ ಸವಾದ್ ಯು., ಮುಹಮ್ಮದ್ ಸವಾದ್ ಆಯ್ಕೆಯಾದರು.
ನಿಕಟಪೂರ್ವ ಕಾರ್ಯದರ್ಶಿ ಶಾಕಿರ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಸುಹೈಲ್ ವಂದಿಸಿದರು.
Next Story