ಆ.27ರಂದು ಉಕ್ಕುಡದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ

ವಿಟ್ಲ, ಆ.25: ವಿಟ್ಲ ಲಯನ್ಸ್ ಕ್ಲಬ್, ಟೋಪ್ಕೋ ಜ್ಯುವೆಲ್ಲರಿ, ಉಕ್ಕುಡ ಬದ್ರಿಯಾ ಜುಮಾ ಮಸೀದಿ ಹಾಗೂ ಉಕ್ಕುಡ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ ನೋಂದಣಿ ಶಿಬಿರವು ಆ.27ರಂದು ಉಕ್ಕುಡ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 8ರಿಂದ ಸಂಜೆ 4ರ ತನಕ ನಡೆಯುವ ಶಿಬಿರಕ್ಕೆ ಬೆಳಗ್ಗೆ 8ರಿಂದ ಟೋಕನ್ ವಿತರಿಸಲಾಗುವುದು. ಆಸಕ್ತರು ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್‌ನೊಂದಿಗೆ ಆಗಮಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊ.ಸಂ. 8073736908 / 9686406915 / 9008857506 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





