ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

ಮಂಗಳೂರು, ಆ.25: ಪಚ್ವನಾಡಿಯಲ್ಲಿರುವ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ. ಮಂಗಳವಾರ ಭೇಟಿ ನೀಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರೊಂದಿಗೆ ಪುನರ್ವಸತಿ ಕೆಲಸಗಳ ರೂಪುರೇಷೆಗಳ ಬಗ್ಗೆ ಸ್ಥಳದಲ್ಲೇ ಚರ್ಚೆ ನಡೆಸಿದರು.
ಅಲ್ಲಿ ಭೂ ಕುಸಿತ ಉಂಟಾದ ಪ್ರದೇಶ ಕ್ಕೆ ಭೇಟಿ ನೀಡಿ ಆಗುತ್ತಿರುವ ಪುನರ್ವವಸತಿ ಕೆಲಸಗಳನ್ನು ಪರಿಶೀಲಿಸಿದರು.
ಈ ಸಂದರ್ಭ ವೈಜ್ಞಾನಿಕವಾಗಿ ಆಗಬೇಕಾದ ತ್ಯಾಜ್ಯ ವಿಲೇವಾರಿ ಕೆಲಸಗಳ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಶಾಸಕರೊಂದಿಗೆ ಸ್ಣಳೀಯ ಪಾಲಿಕೆ ಸದಸ್ಯೆ ಸಂಗೀತಾ ಆರ್., ಪಾಲಿಕೆಯ ಪ್ರಭಾರ ಆಯುಕ್ತ ದಿನೇಶ್, ತಹಶೀಲ್ದಾರ್ ಗುರುಪ್ರಸಾದ್, ಹೆಲ್ತ್ ಆಫೀಸರ್ ಮಧು, ಬಿಜೆಪಿ ಮುಖಂಡ ಸಂದೀಪ್ ಪಚ್ಚನಾಡಿ ಸಹಿತ ಪಾಲಿಕೆ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
Next Story





