ಎಸೆಸೆಲ್ಸಿ, ಮದ್ರಸದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ನೂತನ ಕಚೇರಿ ಉದ್ಘಾಟನೆ

ಉಡುಪಿ, ಆ.25: ಆದಿಉಡುಪಿ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿ ಯಿಂದ ಎಸೆಸೆಲ್ಸಿ ಮತ್ತು ಮದ್ರಸದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಆದಿಉಡುಪಿ ಮಸೀದಿಯ ಹಾಲ್ನಲ್ಲಿ ಮಂಗಳ ವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮದ್ರಸ ಅರೇಬಿಯಾ ನೂರುಲ್ ಇಸ್ಲಾಂನ ಪ್ರಾಂಶು ಪಾಲ ಮೌಲಾನಾ ಜಾವೇದ್ ಕಾಸ್ಮಿ ಮಾತನಾಡಿ, ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳು, ಉತ್ತಮ ಸಾಧನಗೈದು ಸಮಾಜಕ್ಕೆ ಉಪಕಾರವಾಗುವಂತಹ ಕೊಡುಗೆಯ್ನು ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಫಾಜ್ ಆದಿಉಡುಪಿ ವಹಿಸಿದ್ದರು. ಪಿರು ಸಾಹೇಬ್ ಪಂದುಬೆಟ್ಟು ಸಂಸ್ಥೆಯ ನೂತನ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ 4 ವಿದ್ಯಾರ್ಥಿಗಳು ಮತ್ತು ಮದ್ರಸದಲ್ಲಿ ಉತ್ತಮ ಅಂಕ ಪಡೆದ 20 ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು.
ಉದ್ಯಮಿ ಮೊಹಮ್ಮದ್ ಮುಸ್ತಾಫ, ರಿಯಾಝ್ ಅಝೀಝ್, ಮೊಹಮ್ಮದ್ ಮುಸ್ತಫಾ, ಮಸೀದಿಯ ಧರ್ಮಗುರು ಮುಫ್ತಿ ಮೊಹಮ್ಮದ್ ಸುಹೇಲ್ ಉಪಸ್ಥಿತರಿದ್ದರು. ಫಜಿಲ್ ಆದಿಉಡುಪಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಅಸಿಲ್ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.





