ಮಂಗಳೂರು: ವಿವಾಹಿತೆ ನಾಪತ್ತೆ
ಮಂಗಳೂರು, ಆ.25:ನಗರದ ವೆಲೆನ್ಸಿಯಾದ ಹೈಪರ್ ಮಾರ್ಕೆಟ್‌ನಲ್ಲಿ ಕ್ಯಾಶಿಯರ್ ಕೆಲಸ ಮಾಡುತ್ತಿದ್ದ ವೀಣಾ (27) ಎಂಬಾಕೆಯ ಆ.23ರಿಂದ ನಾಪತ್ತೆಯಾಗಿರುವ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೀಣಾ ಮತ್ತು ತನ್ನ ನಡುವೆ ಆ.23ರಂದು ಗಲಾಟೆಯಾಗಿತ್ತು. ಆ ವೇಳೆ ಆಕೆ ಮನೆಯಿಂದ ಹೊರಗೆ ಹೋಗಿದ್ದು ಕಾಣೆಯಾಗಿದ್ದಾಳೆ ಎಂದು ಆಕೆಯ ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
5.5 ಅಡಿ ಎತ್ತರವಿರುವ ವೀಣಾ ಗೋಧಿ ಮೈಬಣ್ಣ ,ಕೋಲುಮುಖ ಹೊಂದಿರುತ್ತಾರೆ. ಕಪ್ಪು ಜೀನ್ಸ್ ಪ್ಯಾಂಟ್ ಹಾಗೂ ಗುಲಾಬಿ ಬಣ್ಣದ ಟಾಪ್ ಧರಿಸಿರುತ್ತಾರೆ. ಮಲಯಾಳ, ತುಳು, ಹಿಂದಿ, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುವ ಇವರನ್ನು ಯಾರಾದರು ಕಂಡಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ (0824-2220525)ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ
Next Story





