ಹಾಸ್ಪಿಟಲ್ ಅಟೆಂಡೆಂಟ್ ನೌಕರರನ್ನು ನಾನ್ ಕ್ಲಿನಿಕಲ್ ಕೆಲಸಕ್ಕೆ ಬಳಸದಂತೆ ಆಗ್ರಹಿಸಿ ಮನವಿ

ಉಡುಪಿ, ಆ.25: ಕರ್ನಾಟಕ ರಾಜ್ಯ ಸರಕಾರಿ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-2 ನೌಕರರನ್ನು ನಾನ್ ಕ್ಲಿನಿಕಲ್ ಕೆಲಸಕ್ಕೆ ಬಳಸಿಕೊಳ್ಳ ಬಾರದೆಂದು ಆಗ್ರಹಿಸಿ ನೌಕರರ ಸಂಘ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಅವರಿಗೆ ಮನವಿ ಸಲ್ಲಿಸಲಾಯಿತು.
ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-2 ಪದನಾಮವನ್ನು ವೌಖಿಕವಾಗಿ ಮತ್ತು ಸಂಬಂಧಿತ ಎಲ್ಲ ಪತ್ರ ವ್ಯವಹಾರಗಳಲ್ಲಿಯೂ ಲಿಖಿತ ರೂಪದಲ್ಲಿ ಬಳಸಲು ಸುತ್ತೋಲೆ ಹೊರಡಿಸಬೇಕು. ಆರೋಗ್ಯ ಸಂಸ್ಥೆಗಳಲ್ಲಿ ಕೇವಲ ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ಬಳಸಿಕೊಳ್ಳಲು ಕ್ರಮ ವಹಿಸಬೇಕು. ಆ ಮೂಲಕ ಈ ನೌಕರರನ್ನು ನಾನ್‌ಕ್ಲಿನಿಕಲ್ ಕೆಲಸಗಳಿಂದ ಮುಕ್ತಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಬಿ., ಸಂಘಟನಾ ಕಾರ್ಯ ದರ್ಶಿಗಳಾದ ಸುಬ್ರಹ್ಮಣ್ಯ, ಅಬ್ದುಲ್ ಚವಾನ, ಸೀಮಾ, ಗೌರವಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಾಬ್, ಜಂಟಿ ಕಾರ್ಯದರ್ಶಿ ಸಂಜಯ್ ನಿತಿನ್, ಕ್ರೀಡಾ ಕಾರ್ಯದರ್ಶಿ ಗುಡ್ಡಪ್ಪ ದೊಡ್ಡಮನಿ, ಪದಾಧಿಕಾರಿ ಗಳಾದ ಪರಶುರಾಮ್, ಬಸವರಾಜ್, ಪ್ರಸಾದ್, ಸಂದೀಪ್ ಪೂಜಾರಿ, ಉಮೇಶ್, ಶ್ರೀಕಲಾ, ಕವಿತಾ, ಜ್ಯೋತಿ, ರಂಜನ, ರೇಶ್ಮಾ ಉಪಸ್ಥಿತರಿದ್ದರು.





