ಸಂಗೊಳ್ಳಿ ರಾಯಣ್ಣರ 224ನೇ ಜಯಂತ್ಯೋತ್ಸವ

ಉಡುಪಿ, ಆ.25: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘ ಉಡುಪಿ ಜಿಲ್ಲೆ ಇದರ ವತಿಯಿಂದ ಸಂಗೊಳ್ಳಿ ರಾಯಣ್ಣರ 224ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ರವಿವಾರ ಉಡುಪಿಯ ಜಿಲ್ಲಾ ಕಚೇರಿಯಲ್ಲಿ ಆಯೋಜಿಸ ಲಾಗಿತ್ತು.
ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸ ಲಾಯಿತು. ಸಂಘಟನೆಯ ಅಧ್ಯಕ್ಷ ಪಾಪಣ್ಣ ಬಿ.ಎನ್., ಉಪಾಧ್ಯಕ್ಷ ಹನು ಮಂತ ವಾಲಿಕಾರ್, ಪ್ರಧಾನ ಕಾರ್ಯದರ್ಶಿ ನಿಂಬಣ್ಣ ನಿಂಬಲಗುಂದಿ, ಖಜಾಂಚಿ ಮಲ್ಲೇಶ್ ಬಿ.ಎನ್., ಗುರುಪ್ರಸಾದ್ ಶರ್ಮ, ಶ್ರೀರಾಮ್, ಮಂಜುನಾಥ್ ಎಸ್., ಮಹೇಶ್, ನರಸಿಂಹ ಮಲ್ಪೆ, ಪ್ರಕಾಶ್ ಕಾಪು, ಮಂಜು ಬಿಚ್ಚುಗತ್ತಿ, ನಿಂಗಪ್ಪಗೌಡರ್ ಮೊದಲಾದವರು ಉಪಸ್ಥಿತರಿದ್ದರು.
Next Story





