ಕೋವಿಡ್ ಆಸ್ಪತ್ರೆಯಿಂದ ಕೊಲೆ ಆರೋಪಿ ಪರಾರಿ

ಮಂಡ್ಯ, ಆ.25: ಮಂಡ್ಯ: ಭಿಕ್ಷುಕಿಯ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಕೀಲಾರ ಗ್ರಾಮದ ಕುಮಾರ್ ಕೊಲೆ ಆರೋಪಿ. ಈತನ ಬಂಧನದ ವೇಳೆ ಕೊರೋನ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಈತನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಿಸ್ಟಾರ್ಜ್ ಆಗುವ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ನಗರದ ಪೂರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಕ್ರಮ ವಹಿಸಿದ್ದಾರೆ.
Next Story





