ಪುತ್ತೂರು: 9 ಮಂದಿಗೆ ಕೊರೋನ ಪಾಸಿಟಿವ್ ದೃಢ
ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಬುಧವಾರ 9 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 580 ಕೊರೋನ ಪ್ರಕರಣಗಳು ವರದಿಯಾಗಿದೆ.
ಪುತ್ತೂರು ನಗರ ಸಭಾ ವ್ಯಾಪ್ತಿಯ ನಗರದ ನಿವಾಸಿ 59 ವರ್ಷದ ಪುರುಷ, ಗ್ರಾಮೀಣ ಪ್ರದೇಶವಾದ ಒಳಮೊಗ್ರು ನಿವಾಸಿ 48 ವರ್ಷದ ಮಹಿಳೆ, ನರಿಮೊಗರು ನಿವಾಸಿ 30 ವರ್ಷದ ಪುರುಷ, ಮುಂಡೂರು ನಿವಾಸಿ 63 ವರ್ಷದ ಪುರುಷ, ಹಳೆನೇರಂಕಿ ನಿವಾಸಿ 35 ವರ್ಷದ ಪುರುಷ, ಹಿರೇಬಂಡಾಡಿ ನಿವಾಸಿ 59 ವರ್ಷದ ಪುರುಷ, ಉಪ್ಪಿನಂಗಡಿ ನಿವಾಸಿ 58 ವರ್ಷದ ಪುರುಷ, ಕಡಬ ತಾಲೂಕಿನ ಕೊಣಾಲು ನಿವಾಸಿ 68 ವರ್ಷದ ಪುರುಷ, ಮರ್ದಾಳ ನಿವಾಸಿ 39 ವರ್ಷದ ಪುರುಷರಲ್ಲಿ ಕೊರೋನಾ ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story