ಉಪ್ಪೂರು : ಯುವಜನತೆಯ ಆಶಾಕಿರಣ ಸರಕಾರಿ ಉಪಕರಣಾಗಾರ, ತರಬೇತಿ ಸಂಸ್ಥೆ
ಡಿಪ್ಲೋಮ ಕೋರ್ಸ್‌ಗೆ ಅರ್ಜಿ ಆಹ್ವಾನ

ಉಡುಪಿ, ಆ.26: ಪರಿಸರದ ಯುವಜನತೆಗೆ ಕೌಶಲ್ಯಾಭಿವೃದ್ಧಿಯಲ್ಲಿ ತರಬೇತಿ ನೀಡುವ ಬಹುನಿರೀಕ್ಷೆಯ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆ (ಜಿಟಿಟಿಸಿ) ಇದೀಗ ಉಪ್ಪೂರು ಗ್ರಾಮದ ಕೊಳಲಗಿರಿಯಲ್ಲಿ ಸುಸಜ್ಜಿತ ರೀತಿಯಲ್ಲಿ ನಿರ್ಮಾಣಗೊಂಡು ಕಾರ್ಯಾರಂಭ ಮಾಡುತಿದ್ದು, ಕರಾವಳಿ ಭಾಗದ ವಿದ್ಯಾಥಿಗರ್ಳ ಪಾಲಿಗೆ ಹೊಸ ಆಶಾಕಿರಣವಾಗಿದೆ.
ಕರ್ನಾಟಕ ಸರಕಾರ ಮತ್ತು ಡೆನ್ಮಾರ್ಕ್ ಸಹಯೋಗದೊಂದಿಗೆ ಈ ಸಂಸ್ಥೆ ಯನ್ನು ಸ್ಥಾಪಿಸಲಾಗಿದೆ. ಸುಮಾರು 45 ಕೋಟಿ ರೂ.ಗಳ ವೆಚ್ಚದಲ್ಲಿ ತಲೆ ಎತ್ತಿರುವ ಈ ತರಬೇತಿ ಸಂಸ್ಥೆಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು 2017ರ ಮೇ 1ರಂದು ಶಂಕು ಸ್ಥಾಪನೆ ನೆರವೇರಿಸಿದ್ದರು.
ಜಿಟಿಟಿಸಿ ಸಂಸ್ಥೆಯು ಕರ್ನಾಟಕ ಸರಕಾರದ ಕೌಶಲ್ಯ ಇಲಾಖೆಗೆ ಒಳಪಟ್ಟಿದ್ದು ಕರ್ನಾಟಕದಲ್ಲಿ 24 ಇಂಥ ಉಪಕೇಂದ್ರಗಳನ್ನು ಹೊಂದಿದೆ. ಎಲ್ಲ ಕೇಂದ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿದ್ದು, ಕೇಂದ್ರದ ಎಐಸಿಟಿಇ ಹಾಗೂ ಡಿಟಿಇಯಿಂದ ಮಾನ್ಯತೆಯನ್ನು ಪಡೆದಿವೆ. ಜಿಟಿಟಿಸಿ ಸಂಸ್ಥೆ ಕೌಶಲ್ಯ ಅಭಿವೃದ್ದಿ ತರಬೇತಿಯಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ.
ಕೈಗಾರಿಕೆಗಳ ಬೆಳವಣಿಗೆ ಹಾಗೂ ಅಭಿವೃದ್ಧಿ ಉತ್ಕೃಷ್ಟ ಕೌಶಲ್ಯದ ತರಬೇತಿ ಮತ್ತು ನೈಪುಣ್ಯತೆ ಪಡೆದ ನುರಿತ ಮಾನವ ಸಂಪನ್ಮೂಲಗಳ ಲಭ್ಯತೆ ಮೇಲೆ ಅವಲಂಭಿತವಾಗಿದೆ. ಉತ್ಕೃಷ್ಟ ರಚನಾತ್ಮಕ, ಮಾಡ್ಯುಲರ್, ಪ್ರಯೋಗಾಧಾರಿತ ದೀರ್ಘಾವಧಿ ಹಾಗೂ ಅಲ್ಪಾವಧಿ ಕೌಶಲ್ಯ ತರಬೇತಿ ಜಿಟಿಟಿಸಿಯ ಪ್ರಮುಖ ಉದ್ದೇಶವಾಗಿದೆ.
ಉಡುಪಿ ಜಿಲ್ಲೆ ಉಪ್ಪೂರು ಗ್ರಾಮದ ಕೊಳಲಗಿರಿ ಮುಖ್ಯ ರಸ್ತೆಯ ಸರಕಾರಿ ಪ್ರೌಢಶಾಲೆ ಬಳಿ ತಲೆಎತ್ತಿರುವ ಭವ್ಯ ಜಿಟಿಟಿಸಿ ಸಂಸ್ಥೆ, ಇದೀಗ ಎಸೆಸೆಲ್ಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಟೂಲ್ ಆಂಡ್ ಡೈ ಮೇಕಿಂಗ್ ಮತ್ತು ಮೆಕಾಟ್ರಾನಿಕ್ಸ್ ವಿಷಯದಲ್ಲಿ ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸ್‌ನ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉದ್ಯೋಗ ಕಲ್ಪಿಸುವ ಯೋಜನೆ ಯನು್ನ ಅನುಷ್ಠಾನಗೊಳಿಸಲು ಮುಂದಾಗಿದೆ.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ತರಬೇತಿ ನೀಡುವುದರ ಜೊತೆಗೆ ಉದ್ಯಮಗಳ ಪರಿಸರಕ್ಕೆ ಹೊಂದಿಕೊಳ್ಳವುದಕ್ಕಾಗಿ ಹೆಚ್ಚಿನ ಕೌಶಲ್ಯ ತರಬೇತಿ ಪಡೆಯಲು ಕೊನೆಯ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಕಡ್ಡಾಯ ತರಬೇತಿಗಾಗಿ ವಿವಿಧ ಉದ್ಯಮ ಹಾಗೂ ಕೈಗಾರಿಕೆಗಳಿಗೆ ಅವರನ್ನು ನಿಯೋಜಿಸಲಾಗುತ್ತದೆ. ಈ ಅವಧಿಯಲ್ಲಿ ಅವರಿಗೆ ಮಾಸಿಕ ಸ್ಟೈಫಂಡ್‌ನ್ನು ಸಹ ನೀಡಲಾಗುತ್ತದೆ ಎಂದು ಘಟಕದ ಮುಖ್ಯಸ್ಥ ಹಾಗೂ ಪ್ರಾಂಶುಪಾಲ ಮಂಜುನಾಥ ನಾಯಕ್ ಎ. ತಿಳಿಸಿದ್ದಾರೆ.
ಆದುದರಿಂದ ಎಸೆಸೆಲ್ಸಿ ತೇರ್ಗಡೆಗೊಂಡ ಆಸಕ್ತರು ಸೆಪ್ಟೆಂಬರ್ 15ರೊಳಗೆ -www.gttc.co.in - ವೆಬ್‌ಸೈಟ್ ಅಥವಾ ಇತ್ತೀಚಿನ ಭಾವಚಿತ್ರ, 10ನೇ ತರಗತಿ ಅಂಕಪಟ್ಟಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇ-ಮೇಲ್ ಐಡಿ ಯೊಂದಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಐಟಿಐ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಡಿಪ್ಲೊಮಾ ಕೋರ್ಸ್‌ನ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ಸೀಟು ಹಂಚಿಕೆ ಮೆರಿಟ್ ಕಂ ರೋಸ್ಟರ್ ಮೂಲಕ ನಡೆಯಲಿದೆ. ಶೇ.30 ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗಾಗಿ ಮೀಸಲಿರಿಸಲಾಗುವುದು. ಜಿಟಿಟಿಸಿಯಲ್ಲಿ ವಿದ್ಯಾರ್ಥಿಗಳಿಗೆ ಅನುಭವಿ ತರಬೇತುದಾರರಿಂದ ವೃತ್ತಿಪರ ಶಿಕ್ಷಣ ನೀಡಲಾಗುತ್ತಿದ್ದು ಉದ್ಯೋಗವನ್ನೂ ಕಲ್ಪಿಸಲಾಗುತ್ತದೆ. ಅಲ್ಲದೇ ಕೌಶಲ ತರಬೇತಿ ನೀಡುವ ಇತರೇ ವೃತ್ತಿಪರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೂ ಇಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಇಂಗ್ಲೀಷ್ ಸಂವಹನ ಕಲೆ ವೃದ್ದಿಸಲು ವಿಶೇಷ ತರಬೇತಿಯನ್ನು ಸಹ ನೀಡಲಾಗುತ್ತದೆ ಎಂದು ಮಂಜುನಾಥ ನಾಯಕ್ ಹೇಳಿದ್ದಾರೆ.
ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮೈಸೂರು ಸೇರಿದಂತೆ ಬೆಂಗಳೂರು, ಪೂನಾ, ನಾಸಿಕ್ ಮತ್ತು ಕೊಯಮತ್ತೂರು ಗಳಲ್ಲಿ ಉದ್ಯೋಗಾವಕಾಶ ಲಭ್ಯವಿದ್ದು ಟೊಯೆಟಾ, ಕಿರ್ಲೋಸ್ಕರ್, ಎಲ್ ಆಂಡ್ ಟಿ, ಟೈಟಾನ್, ಡಿಯೋಕಾನ್ ಇಂಟೆಲ್, ನೋಕಿಯಾದಂತಹ ಕಂಪೆನಿ ಗಳಲ್ಲಿ ಉತ್ತಮ ವೇತನದ ಉ್ಯೋಗವಕಾಶ ಸಿಗುವ ಅವಕಾಶವಿದೆ.
ಅಲ್ಲದೇ ಇಲ್ಲಿ ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳು ಸ್ವಂತ ಕೈಗಾರಿಕೆ ಆರಂಭಿಸಿ ಯಶ್ವಸಿ ಉದ್ಯಮಿಗಳೂ ಆಗಿದ್ದಾರೆ ಸಂಸ್ಥೆಯ ಮುಖ್ಯ ಸ್ಥರೂ ಆದ ಮಂಜುನಾಥ್ ನಾಯಕ್ ತಿಳಿಸಿದ್ದಾರೆ. ಸಂಸ್ಥೆ ಹಾಗೂ ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲ ಮಂಜುನಾಥ ನಾಯಕ್ (ದೂರವಾಣಿ ಸಂಖ್ಯೆ: 0820-2950101, 9880510585) ಇವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟೆ ತಿಳಿಸಿದೆ.










