ಆ. 28-29: ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಂದ ದೂರು ಸ್ವೀಕಾರ
ಮಂಗಳೂರು, ಆ.26: ದ.ಕ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಆ.28 ಮತ್ತು 29ರಂದು ದ.ಕ.ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ.
ಆ.28ರಂದು ಪೂ.11ಕ್ಕೆ ಸುಳ್ಯ ಸರಕಾರಿ ನಿರೀಕ್ಷಣಾ ಮಂದಿರ, ಮಧ್ಯಾಹ್ನ 2:30ಕ್ಕೆ ಪುತ್ತೂರು ಸರಕಾರಿ ನಿರೀಕ್ಷಣಾ ಮಂದಿರ, ಆ.29ರಂದು ಬೆಳ್ತಂಗಡಿ ಸರಕಾರಿ ನಿರೀಕ್ಷಣಾ ಮಂದಿರ, ಮಧ್ಯಾಹ್ನ 2:30ಕ್ಕೆ ಬಂಟ್ವಾಳ ಸರಕಾರಿ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡುವರು. ಮಾಹಿತಿಗೆ ದೂ.ಸಂ: 0824-2483000ಕೆ ಸಂಪರ್ಕಿಸಲು ಭ್ರಷ್ಟಾಚಾರ ನಿಗ್ರಹದಳದ ಆರಕ್ಷಕ ನಿರೀಕ್ಷಕರ ಪ್ರಕಟನೆ ತಿಳಿಸಿದೆ.
Next Story





