ಸೆ.1: ಮೆಡೊಕ್ ಪಾಲಿಕ್ಲಿನಿಕ್‌ನಿಂದ ಕೋವಿಡ್ ಪರೀಕ್ಷೆ
ಮಂಗಳೂರು, ಆ.26: ರಾಹೆ.66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಮೆಡೋಕ್ ಪಾಲಿಕ್ಲಿನಿಕ್ ವತಿಯಿಂದ ಸೆಪ್ಟಂಬರ್ 1ರಿಂದ ಕೋವಿಡ್ ಪರೀಕ್ಷೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಕೊರೋನ ಹಿನ್ನೆಲೆಯಲ್ಲಿ ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಅವಶ್ಯವಿರುವ ಕಾರಣ ಮೆಡೋಕ್ ಪಾಲಿಕ್ಲಿನಿಕ್ ಕೋವಿಡ್ ಪರೀಕ್ಷೆ ನಡೆಸಿದ 24 ಗಂಟೆಯೊಳಗೆ ವರದಿ ನೀಡಲಿದೆ. ಶಸ್ತ್ರಚಿಕಿತ್ಸೆ ಮಾಡುವ ರೋಗಿಗಳಿಗೆ, ಗರ್ಭಿಣಿಯರಿಗೆ, ಕಾಲೇಜು ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ, ಹೊರರಾಜ್ಯಕ್ಕೆ ತೆರಳುವವರಿಗೆ ನಾನ್-ಕೋವಿಡ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅವಶ್ಯವಿದ್ದವರಿಗೆ ಮನೆಗೂ ತೆರಳಿ ದ್ರವದ ಸ್ಯಾಂಪಲ್ ಸಂಗ್ರಹಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಮಾಹಿತಿಗೆ ಮೊ.ಸಂ: 8686212104ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ
Next Story





