ಮಣಿಪಾಲ, ಆ.26: ಮಣಿಪಾಲದ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಸುರೇಶ ಬೈರನ್ನಟ್ಟಿ(41) ಎಂಬವರು ಆ.26ರಂದು ಮಧ್ಯಾಹ್ನ ವೇಳೆ ಬಾರ್ ಸಮೀಪದ ಅಂಗಡಿ ಎದುರು ಹೃದಯಾಘಾತದಿಂದ ಅಥವಾ ಇತರ ಕಾರಣದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.