ಬಿಜೆಪಿ ರಾಜ್ಯ ಮೋರ್ಚಾ ಕಾರ್ಯದರ್ಶಿಗಳಾಗಿ ದಿನಕರ ಬಾಬು, ಎಂ.ಸಲೀಂ ಅಂಬಾಗಿಲು ಆಯ್ಕೆ
ದಿನಕರ ಬಾಬು-ಸಲೀಂ
ಉಡುಪಿ, ಆ.26: ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು ಹಾಗೂ ಎಂ.ಸಲೀಂ ಅಂಬಾಗಿಲು ಇವರುಗಳನ್ನು ಕ್ರಮವಾಗಿ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿಗಳಾಗಿ ನಿಯುಕ್ತಿ ಗೊಳಿಸಲಾಗಿದೆ ಎಂದು ಪಕ್ಷದ ಮಂಗಳೂರು ವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಳಿದಂತೆ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಜಿಪಂ ಸದಸ್ಯೆ ಶಿಲ್ಪಾ ಜಿ ಸುವರ್ಣ, ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ದಕ್ಷಿಣ ಕನ್ನಡದ ಎ.ವಿ.ತೀರ್ಥರಾಮ, ಕಾರ್ಯದರ್ಶಿಯಾಗಿ ಕೊಡಗಿನ ಡಾ. ನವೀನ್ಕುಮಾರ್, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಯಾಗಿ ದಕ್ಷಿಣ ಕನ್ನಡದ ಎಸ್.ಶ್ವೇತಾ, ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಉಡುಪಿಯ ವಿಠಲ ಪೂಜಾರಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಅಲ್ಲದೇ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ದಕ್ಷಿಣ ಕನ್ನಡದ ಎನ್. ಎಸ್.ಮಂಜುನಾಥ, ಕಾರ್ಯದರ್ಶಿಯಾಗಿ ಕೊಡಗಿನ ಮಂಜುಳ ಇವರನ್ನು ನೇಮಿಸಲಾಗಿದೆ ಎಂದು ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.