ಚೀನಾದ 24 ಕಂಪೆನಿಗಳು, ಅಧಿಕಾರಿಗಳಿಗೆ ಅಮೆರಿಕ ದಿಗ್ಬಂಧನ

ವಾಶಿಂಗ್ಟನ್, ಆ. 26: ದಕ್ಷಿಣ ಚೀನಾ ಸಮುದ್ರದಲ್ಲಿರುವ ವಿವಾದಾಸ್ಪದ ಜಲಪ್ರದೇಶದಲ್ಲಿ ಕೃತಕ ದ್ವೀಪಗಳ ನಿರ್ಮಾಣದಲ್ಲಿ ಭಾಗಿಯಾಗಿರುವ ಚೀನಾದ 24 ಕಂಪೆನಿಗಳು ಮತ್ತು ಅವುಗಳ ಅಧಿಕಾರಿಗಳ ವಿರುದ್ಧ ಅಮೆರಿಕ ಬುಧವಾರ ದಿಗ್ಬಂಧನಗಳು ಮತ್ತು ನಿರ್ಬಂಧಗಳನ್ನು ಘೋಷಿಸಿದೆ.
ಇವುಗಳೆಲ್ಲವೂ ಚೀನಾದ ಸರಕಾರಿ ಒಡೆತನದ ಕಂಪೆನಿಗಳಾಗಿದ್ದು, ನಿರ್ಮಾಣ ಕ್ಷೇತ್ರದ ದೈತ್ಯ ಚೀನಾ ಕಮ್ಯುನಿಕೇಶನ್ಸ್ ಕನ್‌ಸ್ಟ್ರಕ್ಷನ್ ಕಂಪೆನಿಯ ಸಹ ಸಂಸ್ಥೆಗಳು, ಟೆಲಿಸಂಪರ್ಕ ಸಂಸ್ಥೆಗಳು ಮತ್ತು ಚೀನಾ ಹಡಗುನಿರ್ಮಾಣ ಗುಂಪಿನ ಒಂದು ಘಟಕವು ದಿಗ್ಬಂಧನಕ್ಕೊಳಗಾಗಿರುವ ಕಂಪೆನಿಗಳಲ್ಲಿ ಸೇರಿವೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ಜಮಾವಣೆಗೆ ಸಂಬಂಧಿಸಿ ಚೀನಾದ ಮೇಲೆ ಒತ್ತಡ ಹೇರುವ ಅಮೆರಿಕದ ಪ್ರಯತ್ನಗಳ ಭಾಗವಾಗಿ ಈ ಹೊಸ ದಿಗ್ಬಂಧನಗಳನ್ನು ಘೋಷಿಸಲಾಗಿದೆ ಎಂದು ಭಾವಿಸಲಾಗಿದೆ.
Next Story





