ಉತ್ತರ ಪ್ರದೇಶ: ರಾಜ್ಯಸಭಾ ಉಪಚುನಾವಣೆಗೆ ಸೈಯದ್ ಝಫರ್ ಇಸ್ಲಾಂ ಬಿಜೆಪಿ ಅಭ್ಯರ್ಥಿ

ಹೊಸದಿಲ್ಲಿ: ಉತ್ತರ ಪ್ರದೇಶದಿಂದ ರಾಜ್ಯಸಭಾ ಸ್ಥಾನಕ್ಕೆ ಸೆಪ್ಟಂಬರ್ 11ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ತನ್ನ ವಕ್ತಾರ ಸೈಯದ್ ಝಫರ್ ಇಸ್ಲಾಂ ಅವರನ್ನು ಅಭ್ಯರ್ಥಿಯನ್ನಾಗಿ ಆರಿಸಿದೆ.
ರಾಜ್ಯಸಭಾ ಸಂಸದ ಅಮರ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸ್ಥಾನ ತುಂಬಲು ಈ ಉಪಚುನಾವಣೆ ನಡೆಸಲಾಗುವುದು.
ಮಾಜಿ ಬ್ಯಾಂಕರ್ ಆಗಿರುವ ಸೈಯದ್ ಝಫರ್ ಇಸ್ಲಾಂ ಅವರು ಮಾಜಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದವರೆಂದು ಹೇಳಲಾಗುತ್ತಿದೆ.
ಬಿಜೆಪಿಯು ಮುಸ್ಲಿಂ ನಾಯಕರಿಗೆ ಸೂಕ್ತ ಅವಕಾಶಗಳನ್ನು ನೀಡುತ್ತಿಲ್ಲ ಎಂಬ ಅಪವಾದಗಳನ್ನೂ ದೂರಗೊಳಿಸುವ ಯತ್ನವಾಗಿ ಪಕ್ಷ ಝಫರ್ ಇಸ್ಲಾಂ ಅವರನ್ನು ಅಭ್ಯರ್ಥಿಯನ್ನಾಗಿ ಆರಿಸಿದೆಯೆನ್ನಲಾಗಿದೆ.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿರುವುದರಿಂದ ರಾಜ್ಯಸಭಾ ಚುನಾವಣೆಯಲ್ಲಿ ಝಫರುಲ್ ಜಯಗಳಿಸುವ ಸಾಧ್ಯತೆ ನಿಚ್ಚಳವಾಗಿದೆ.
Next Story





