ಮಂಗಳೂರು: ಏರ್ ಇಂಡಿಯಾ ಕಚೇರಿ ಸ್ಥಳಾಂತರ
ಮಂಗಳೂರು, ಆ.27: ನಗರದ ಲಾಲ್ ಬಾಗ್ ಹ್ಯಾಟ್‌ಹಿಲ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಏರ್ ಇಂಡಿಯಾ ಸಂಸ್ಥೆಯ ಕಾದಿರಿಸುವಿಕೆ, ಟಿಕೆಟ್ ಮತ್ತು ಮಾರಾಟ ಕಚೇರಿಯನ್ನು ಆ.31ರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು. ಈ ಕಚೇರಿಯು ಪ್ರತೀ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9:45ರಿಂದ ಸಂಜೆ 5:20ರವರೆಗೆ ಕಾರ್ಯಾಚರಿಸಲಿದೆ.
ಮಾಹಿತಿಗಾಗಿ ಏರ್ ಇಂಡಿಯಾ ಕಚೇರಿಯ ದೂ.ಸಂ: 0824-2220450, 2220451, ಏರ್ ಇಂಡಿಯಾ ಕಾಲ್ ಸೆಂಟರ್ 18602331407ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





