‘ಸಂತುಷ್ಟ ಕುಟುಂಬ’ ಕಾರ್ಯಕ್ರಮ ಕುರಿತು ಸಭೆ

ಮಂಗಳೂರು, ಆ. 27:ದ.ಕ. ಜಿಲ್ಲಾ ವತಿಯಿಂದ ಎಸ್‌ವೈಎಸ್ ಬ್ರಾಂಚ್ ವ್ಯಾಪ್ತಿಯ ಮನೆಗಳಲ್ಲಿ ತಿಂಗಳಿಗೊಮ್ಮೆ ನಡೆಸುವ ‘ಅಲ್ ಉಸ್ರತುತ್ತಯ್ಯಿಬ’ (ಸಂತುಷ್ಟ ಕುಟುಂಬ) ಎಂಬ ಕಾರ್ಯಕ್ರಮದ ಅನುಷ್ಠಾನದ ಕುರಿತ ಸಭೆಯು ಪಡೀಲ್‌ನ ಇಲ್ಮ್ ಸೆಂಟರ್‌ನಲ್ಲಿ ಜರುಗಿತು.
ಎಸ್‌ವೈಎಸ್ ದ.ಕ.ಜಿಲ್ಲಾಧ್ಯಕ್ಷ ಸಿ.ಎಚ್ ಮಹಮ್ಮದ್ ಅಲಿ ಸಖಾಫಿ ಅಶ್‌ಅರಿಯ ಅಧ್ಯಕ್ಷತೆ ವಹಿಸಿದ್ದರು. ದಅ್ವಾ ಮತ್ತು ಶಿಕ್ಷಣ ಸಮಿತಿಯ ಕಾರ್ಯದರ್ಶಿ ಬದ್ರುದ್ದೀನ್ ಅಝ್ಹರಿ ಉದ್ಘಾಟಿಸಿದರು.ಮಾಡಿದರು.
ಎಸ್‌ವೈಎಸ್ ಜಿಲ್ಲಾ ನಾಯಕರಾದ ಇಸ್ಮಾಯಿಲ್ ಕೆಎಸ್ಸಾರ್ಟಿಸಿ, ಇಸ್ಹಾಕ್ ಝುಹ್ರಿ ಸೂರಿಂಜೆ, ವಿಎ ಮುಹಮ್ಮದ್ ಸಖಾಫಿ ವಳವೂರು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸದಸ್ಯರಾದ ಫಾರೂಕ್ ಕೆಸಿ ರೋಡ್, ಅಬ್ದುಲ್ ಮಜೀದ್ ಹರೇಕಳ, ಉಮರುಲ್ ಫಾರೂಕ್ ಶೇಡಿಗುರಿ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.
Next Story





