ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ತುಂಬೆಗೆ ಸಂತಾಪ ಸಭೆ

ಮಂಗಳೂರು, ಆ.27: ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ, ಪ್ರತಿಷ್ಠಿತ ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ತುಂಬೆ ಅವರಿಗೆ ನಗರದ ಬದ್ರಿಯಾ ಸಂಯುಕ್ತ ಪದವಿಪೂರ್ವ ಕಾಲೇಜು ವತಿಯಿಂದ ಸಂತಾಪ ಸಭೆಯು ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ಡಿ. ಸುಮಾರು 4 ದಶಕಗಳಿಂದ ಬದ್ರಿಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ತುಂಬೆ ಅವರ ಬದ್ಧತೆ, ಶಿಕ್ಷಣ ಪ್ರೇಮ, ಶಿಕ್ಷಕ-ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಮೇಲಿದ್ದ ಕಾಳಜಿಯನ್ನು ಶ್ಲಾಘಿಸಿದರು.
ಬದ್ರಿಯಾ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ರಹ್ಮತ್ ಅಲಿ, ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸರಳಾ ವರ್ಗೀಸ್, ಕನ್ನಡ ಮಾಧ್ಯಮ ಶಾಲೆಯ ಮೊಹಮ್ಮದ್ ಇಕ್ಬಾಲ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ನುಶ್ರತ್, ಆಡಳಿತ ಮಂಢಳಿಯ ವ್ಯವಸ್ಥಾಪಕ ಜಗನ್ನಾಥ ಶೆಟ್ಟಿ ಮಾತನಾಡಿದರು.
Next Story





