ಉಕ್ಕುಡ : 410 ಮಂದಿಗೆ ಉಚಿತ ಆಯುಷ್ಮಾನ್ ಕಾರ್ಡ್ ನೋಂದಾವಣೆ

ವಿಟ್ಲ : ಸಮೀಪದ ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ ಗುರುವಾರ ಆಯೋಜಿಸಿದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರದಲ್ಲಿ 410 ಫಲಾನುಭವಿಗಳು ಪ್ರಯೋಜನ ಪಡೆದರು.
ವಿಟ್ಲ ಲಯನ್ಸ್ ಕ್ಲಬ್, ವಿಟ್ಲ ಮತ್ತು ಪುತ್ತೂರು ಟೋಪ್ಕೋ ಜ್ಯುವೆಲ್ಲರಿ, ಬದ್ರಿಯಾ ಜುಮಾ ಮಸೀದಿ ಉಕ್ಕುಡ, ಉಕ್ಕುಡ ಪಬ್ಲಿಕ್ ಸ್ಕೂಲ್ ಸಹಯೋಗದೊಂದಿಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರಶೀದ್ ವಿಟ್ಲ ವಹಿಸಿದರು. ದೇಶದ ಕೋಟ್ಯಾಂತರ ಕುಟುಂಬಕ್ಕೆ ಅನುಕೂಲವಾಗಲಿರುವ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿ ಬಿಪಿಎಲ್ ಕುಟುಂಬ ವಾರ್ಷಿಕವಾಗಿ ರೂ. 5 ಲಕ್ಷ ಅರೋಗ್ಯ ವಿಮೆ ಪಡೆಯಲಿದೆ. ಎಪಿಎಲ್ ಕುಟುಂಬ ವಾರ್ಷಿಕ 1.5 ಲಕ್ಷದ ಆರೋಗ್ಯ ವಿಮೆ ಪಡೆಯಬಹುದು.
ದೇಶಾದ್ಯಂತ ಈ ಯೋಜನೆ ಅನ್ವಯವಾಗಲಿದ್ದು, ಈ ಯೋಜನೆಯಡಿಯಲ್ಲಿ ಯಾವುದೇ ಸರ್ಕಾರಿ ಅಥವಾ ಸರ್ಕಾರದಿಂದ ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಕೊರೋನ ಚಿಕಿತ್ಸೆಗೂ ಆಯುಷ್ಮಾನ್ ಕಾರ್ಡ್ ಬಳಸಬಹುದು ಎಂದು ರಶೀದ್ ವಿಟ್ಲ ಹೇಳಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಹರ್ಷಿತ್, ಕೋಶಾಧಿಕಾರಿ ಭಾರತಿ ಪ್ರಕಾಶ್, ಸದಸ್ಯ ಪ್ರಕಾಶ್ ವಿಟ್ಲ, ಟೋಪ್ಕೋ ಜ್ಯುವೆಲ್ಲರಿ ಮಾಲಕರಾದ ಮಹಮ್ಮದ್ ಟಿ.ಕೆ., ಉಕ್ಕುಡ ಜುಮಾ ಮಸೀದಿ ಕಾರ್ಯದರ್ಶಿ ಶರೀಫ್ ತ್ವೈಬಾ, ಉಕ್ಕುಡ ಪಬ್ಲಿಕ್ ಸ್ಕೂಲ್ ಮಾಜಿ ಅಧ್ಯಕ್ಷ ಹಮೀದ್ ಟಿ.ಎಚ್.ಎಂ.ಎ., ಕಾರ್ಯದರ್ಶಿ ಹನೀಫ್ ಕುದ್ದುಪದವು, ಕೋಶಾಧಿಕಾರಿ ಅನ್ವರ್ ಉಕ್ಕುಡ, ಸಂಚಾಲಕ ಅಬೂಬಕರ್ ಟೆಲಿಫೋನ್, ಜೊತೆ ಕಾರ್ಯದರ್ಶಿ ಮುನೀರ್ ದರ್ಬೆ, ಸದಸ್ಯ ಸಿದ್ದೀಕ್ ಆಲಂಗಾರು, ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ನೆಕ್ಕರೆಕಾಡು, ಪದಾಧಿಕಾರಿಗಳಾದ ಡಿ.ಎಂ. ಅಬ್ದುರ್ರಹ್ಮಾನ್ ದರ್ಬೆ, ಅಬೂಬಕರ್ ಮೆಹರಾಜ್, ಮಹಮೂದ್ ಕಾನತ್ತಡ್ಕ, ಡಿ.ಕೆ. ಅಬ್ದುಲ್ ಖಾದರ್, ಅದ್ದು ಬುಡಾಲ್ತಡ್ಕ, ಶರೀಫ್ ಫಿಶ್, ಹಸನ್ ಟಿ.ಎಚ್.ಎಂ.ಎ. ಮೊದಲಾದವರು ಉಪಸ್ಥಿತರಿದ್ದರು.
ಮುಸ್ತಫಾ ದೇರಳಕಟ್ಟೆ, ಅಶ್ರಫ್ ಕುಕ್ಕಾಜೆ ಆಯುಷ್ಮಾನ್ ಭಾರತ್ ಕುರಿತು ಮಾಹಿತಿ ನೀಡಿದರು. ಡಿ.ಎಂ. ರಶೀದ್ ದರ್ಬೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ನೋಂದಾವಣೆ ಮಾಡಿರುವ ಆಯುಷ್ಮಾನ್ ಕಾರ್ಡ್ ಟೋಕನ್ ನಂಬ್ರ ಪ್ರಕಾರ ಆಗಸ್ಟ್ 31 ರಿಂದ ಸೆಪ್ಟಂಬರ್ 3 ರ ತನಕ ವಿಟ್ಲ ಟೋಪ್ಕೋ ಜ್ಯುವೆಲ್ಲರಿಯಲ್ಲಿ ಉಚಿತವಾಗಿ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.







