ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸೇವೆಗಳನ್ನು ಆರಂಭಿಸಬೇಕು: ಕವಿತಾ ಸನಿಲ್ ಒತ್ತಾಯ

ಮಂಗಳೂರು: ಭಕ್ತರ ಹಾಗೂ ಅರ್ಚಕರ ಹಿತದೃಷ್ಟಿಯಿಂದ ಸರ್ಕಾರ, ಜಿಲ್ಲಾಡಳಿತ ಕೂಡಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸೇವೆಗಳನ್ನು ಆರಂಭಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡೆ ಕವಿತಾ ಸನಿಲ್ ಆಗ್ರಹಿಸಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ದೇಗುಲದ ಅರ್ಚಕರಿಗೆ ತಮ್ಮ ಕಷ್ಟವನ್ನು ಯಾರತ್ರನೂ ಹೇಳಕ್ಕಾಗಲ್ಲ. ಅವರಿಗೆ ದೇವರ ಕೆಲಸ ಬಿಟ್ಟು ಬೇರೆ ಏನೂ ಕೆಲಸ ಮಾಡಕ್ಕಾಗಲ್ಲ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ ದೇಗುಲಗಳ ಬಾಗಿಲನ್ನು ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು. ಇದಕ್ಕೆ ಅವಕಾಶ ಸರ್ಕಾರ ಕೊಡಬಾರದು ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಸರಕಾರ ಬಾರ್ ,ವೈನ್ ಶಾಪ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಅದ್ರೆ ಅವರು ಯಾವ ರೀತಿ ಸಾಮಾಜಿಕ ಅಂತರ ಪಾಲಿಸುತ್ತಾರೆ ಎಂಬುದು ಎಲ್ಲಾರಿಗೂ ಗೊತ್ತು ? ಅದ್ದರಿಂದ ದೇವಸ್ಥಾನಗಳಲ್ಲಿ ಸೇವೆಯನ್ನು ಅರಂಭಿಸಿದರೆ ಅರ್ಚಕರ ವೃಂದ, ಅಡಳಿತ ಮಂಡಳಿಯವರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸವನ್ನು ನಡೆಸುತ್ತಾರೆ ಎಂಬ ವಿಶ್ವಾಸ ಇದೆ ಅದ್ದರಿಂದ ಸರಕಾರ ಶೀಘ್ರದಲ್ಲೇ ದೇವಸ್ಥಾನಗಳಲ್ಲಿ ಸೇವೆ ಅರಂಭಿಸಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.





