ಆಟೋ ಚಾಲಕನನ್ನು ಚೂರಿಯಿಂದ ಇರಿದು ಕೊಂದ ರೌಡಿಶೀಟರ್

ಮೈಸೂರು,ಆ.27: ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ ಮತ್ತು ಆತನ ಸ್ನೇಹಿತರು ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದ ಪರಿಣಾಮ ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ.
ಮೃತನನ್ನು ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಸೋಮಶೇಖರ್(36) ಎಂದು ಗುರುತಿಸಲಾಗಿದೆ. ಬಿ.ಎಂ.ಶ್ರೀ ನಗರದ ತೋಟದ ಮನೆ ಹತ್ತಿರ ರಾತ್ರಿಯಲ್ಲಿ ತೆರಳುತ್ತಿದ್ದಾಗ ರೌಡಿಶೀಟರ್ ಆಗಿರುವ ಸತ್ಯ ಮತ್ತವನ ಸ್ನೇಹಿತರು ಸೋಮಶೇಖರ್ ಮುಖಕ್ಕೆ ಮೊಬೈಲ್ ನಿಂದ ಟಾರ್ಚ್ ಬೆಳಕು ಹರಿಸಿದ್ದು, ಬಳಿಕ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಸೋಮಶೇಖರ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಘಟನೆಯ ಬಳಿಕ ರೌಡಿಶೀಟರ್ ಸತ್ಯ ತಲೆಮರೆಸಿಕೊಂಡಿದ್ದು ಮೇಟಗಳ್ಳಿ ಠಾಣಾ ಇನ್ಸಪೆಕ್ಟರ್ ಮಲ್ಲೇಶ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





