ಬಿಬಿಎಂಪಿ ಚುನಾವಣೆ ಹಿನ್ನೆಲೆ: ಬಿಜೆಪಿ ಸೇರಲು ಸಿದ್ಧತೆ ನಡೆಸಿದ ಕಾಂಗ್ರೆಸ್- ಜೆಡಿಎಸ್ ಸದಸ್ಯರು

ಬೆಂಗಳೂರು, ಆ.28: ಬಿಬಿಎಂಪಿ ಹಾಲಿ ಸದಸ್ಯರ ಅಧಿಕಾರಾವಧಿ ಸೆ.10ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆ ಕೆಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ.
ಸದ್ಯ ಲಗ್ಗೆರೆ ವಾರ್ಡ್‍ನ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ಎನ್.ಸ್ವಾಮಿ, ಬಿಟಿಎಂ ಲೇಔಟ್ ಪಾಲಿಕೆ ಸದಸ್ಯ ಕೆ. ದೇವದಾಸ್, ಮಾರತ್‍ಹಳ್ಳಿ ವಾರ್ಡ್‍ನ ಪಕ್ಷೇತರ ಪಾಲಿಕೆ ಸದಸ್ಯ ಎನ್. ರಮೇಶ್, ಕೋನೇನ್ ಅಗ್ರಹಾರ ವಾರ್ಡ್ ಪಾಲಿಕೆ ಸದಸ್ಯ ಎಂ.ಚಂದ್ರಪ್ಪ ರೆಡ್ಡಿ ಅವರು ಬಿಜೆಪಿಗೆ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮುಂಬರುವ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸಲು ಈ ಎಲ್ಲ ಹಾಲಿ ಪಾಲಿಕೆ ಸದಸ್ಯರು ಸಿದ್ಧತೆ ನಡೆಸಿದ್ದಾರೆ. ಆದರೆ, ಕಳೆದ ಬಾರಿಯ ಪಾಲಿಕೆ ಚುನಾವಣೆಯಲ್ಲಿ, ಕೈ ಅಭ್ಯರ್ಥಿ ಎದುರು ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿಗಳು ಈ ಬಾರಿ ಟಿಕೆಟ್ ಪಡೆಯಲು ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್-ಜೆಡಿಎಸ್ ಸದಸ್ಯರು ಬಿಜೆಪಿಗೆ ಬಂದರೆ ಟಿಕೆಟ್ ತಪ್ಪುವ ಆತಂಕ ಕೂಡ ಶುರುವಾಗಿದೆ.
Next Story





