6.30ಲಕ್ಷ ರೂ. ಮೊತ್ತದ ಪಿಪಿಇ ಕಿಟ್, ಮಾಸ್ಕ್ ದೇಣಿಗೆ

ಉಡುಪಿ, ಆ.28: ಕೊರೋನ ವಾರಿಯರ್ಸ್‌ಗೆ ನೆರವಾಗಲು ಜಿಲ್ಲಾ ಕ್ವಾರಿ ಮತ್ತು ಕ್ರಷರ್ ಮಾಲಕರ ಸಂಘದ ವತಿಯಿಂದ ಇಂದು 6.30 ಲಕ್ಷ ರೂ. ಮೊತ್ತದ ಒಂದು ಸಾವಿರ ಪಿಪಿಇ ಕಿಟ್, ಒಂದು ಸಾವಿರ ಎನ್95 ಮಾಸ್ಕ್‌ಗಳನ್ನು ಜಿಲ್ಲಾಳಿತಕ್ಕೆ ದೇಣಿಗೆಯಾಗಿ ನೀಡಲಾಯಿತು.
ಇವುಗಳನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಸಾಂಕೇತಿಕ ವಾಗಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಸತೀಶ್ ಕಿಣಿ, ಗೌರವಾಧ್ಯಕ್ಷ ಕೆ.ಸಿ.ಕಾಮತ್, ಕಾರ್ಯದರ್ಶಿ ಮಹೇಶ್ ಹೆಗ್ಡೆ, ಗಣಿ ಇಲಾಖೆ ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ಉಪಸ್ಥಿತರಿದ್ದರು.
Next Story





