ಚೀನಾದಲ್ಲಿ ಭಾರತೀಯ ವೈದ್ಯ ಡಾ.ಕೋಟ್ನಿಸ್ ಪ್ರತಿಮೆ

Photo: www.xinhuanet.com
ಬೀಜಿಂಗ್,ಆ.28: ದ್ವಿತೀಯ ಮಹಾಯುದ್ಧ ಕಾಲದಲ್ಲಿ ಚೀನಾದಲ್ಲಿ ಅಸಾಧಾರಣವಾದ ವೈದ್ಯಕೀಯ ಸೇವೆಯನ್ನು ಸಲ್ಲಿಸಿ, ಭಾರತೀಯ ವೈದ್ಯ ದಿವಂಗತ ಡಾ. ದ್ವಾರಕಾನಾಥ ಕೋಟ್ನಿಸ್ ಸ್ಮರಣಾರ್ಥವಾಗಿ ಅವರ ಕಂಚಿನ ಪ್ರತಿಮೆಯೊಂದನ್ನು ಮುಂದಿನ ತಿಂಗಳು ಚೀನಾದಲ್ಲಿ ಅನಾವರಣಗೊಳ್ಳಲಿದೆ. ಉತ್ತರ ಚೀನಾದ ಶಿಜಿಯಾಝ್ಹುವಾಂಗ್ ನಗರದ ವೈದ್ಯಕೀಯ ವಿದ್ಯಾಲಯದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಡಾ.ಕೋಟ್ನಿಸ್ ಮೂಲತಃ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯವರು. ಎರಡನೆ ಮಹಾಯುದ್ಧ ಕಾಲದಲ್ಲಿ ಚೀನಿ ಜನತೆಗೆ ನೆರವಾಗಲು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಕಳುಹಿಸಿದ್ದ ಐದು ಮಂದಿಯ ವೈದ್ಯಕೀಯ ಸಿಬ್ಬಂದಿಯ ತಂಡಲ್ಲಿ ಕೋಟ್ನಿಸ್ ಇದ್ದರು. ಚೀನಿ ಕ್ರಾಂತಿಯ ಸಂಕಷ್ಟಕರ ಸಮಯದಲ್ಲಿಯೂ ಕೋಟ್ನಿಸ್ ಚೀನಾದ ಜನತೆಗೆ ನೀಡಿದ ವೈದ್ಯಕೀಯ ನೆರವನ್ನು ಕಮ್ಯೂನಿಸ್ಟ್ ಚೀನದ ಸ್ಥಾಪಕ ಮಾವೋ ತ್ಸೆ ತುಂಗ್ ಶ್ಲಾಘಿಸಿದ್ದುರು.
Next Story





