ಪಾಣೆಮಂಗಳೂರು: 'ಬ್ಯಾಂಬೋ ಕಿಚನ್' ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ
ವಿವಿಧ ವಿಶೇಷ, ರುಚಿಕರವಾದ ಇಂಡಿಯನ್, ಅರೇಬಿಯನ್, ಚೈನೀಸ್ ಫುಡ್ ಮಳಿಗೆ

ಬಂಟ್ವಾಳ, ಆ. 28: ಇಂಡಿಯನ್, ಅರೇಬಿಯನ್, ಚೈನೀಸ್ ಆಹಾರಕ್ಕೆ ಹೆಸರುವಾಸಿಯಾದ 'ಬ್ಯಾಂಬೋ ಕಿಚನ್' ಫ್ಯಾಮಿಲಿ ರೆಸ್ಟೋರೆಂಟ್ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬೈಪಾಸ್ ರಸ್ತೆಯ ಬಿ.ಎಚ್. ಕಾಂಪ್ಲೆಕ್ಸ್ ನಲ್ಲಿ ಗುರುವಾರ ಸಂಜೆ ಶುಭಾರಂಭಗೊಂಡಿದೆ.
'ಬ್ಯಾಂಬೋ ಕಿಚನ್' ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಕರ್ನಾಟಕ ಜಮೀಅತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಅ ಮೂಲಕ ಉದ್ಘಾಟಿಸಿದರು.
ಫ್ಯಾಮಿಲಿ ರೂಂ, ಪಾರ್ಟಿ ಪಾಯಿಂಟ್, ಡಿನ್ನರ್ ವ್ಯವಸ್ಥೆಯನ್ನು ಹೊಂದಿರುವ 'ಬ್ಯಾಂಬೋ ಕಿಚನ್' ವಾರದ ಎಲ್ಲಾ ದಿನವೂ ಬೆಳಗ್ಗೆ 11ರಿಂದ ರಾತ್ರಿ 10ಗಂಟೆಯ ವರೆಗೆ ತೆರೆದಿರುತ್ತದೆ. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಾಣೆಮಂಗಳೂರು ಸುತ್ತಮುತ್ತಲಿನ 3 ಕಿಲೋ ಮೀಟರ್ ವರೆಗೆ ಹೋಂ ಡೆಲಿವರಿಯನ್ನು ನೀಡಲಾಗುವುದು. ಬಲ್ಕ್ ಆಡರ್ ಗಳನ್ನು ತೆಗೆಯಲಾಗುವುದು ಎಂದು ರೆಸ್ಟೋರೆಂಟ್ ಮಾಲಕರಾದ ಅಬ್ದುಲ್ ಸಮದ್ ಬಿಕರ್ನಕಟ್ಟೆ, ರಶೀದ್ ರ್ಯಾಶ್ ಬ್ಯಾರಿ ಬಿಕರ್ನಕಟ್ಟೆ ತಿಳಿಸಿದ್ದಾರೆ.
ಬ್ಯಾಂಬೋ ಬಿರಿಯಾನಿ ಜೊತೆಗೆ, ವೆರೈಟಿ ಟಿಕ್ಕ, ಅಲ್ಫಾಮ್, ಶವರ್ಮ, ದಮ್ ಬಿರಿಯಾನಿ, ಫಿಝಿ ಬಿರಿಯಾನಿ, ಮೀನಿನ ಖಾದ್ಯಗಳು ಸಹಿತ ವಿವಿಧ ವಿಶೇಷ ಮತ್ತು ರುಚಿಕರವಾದ ಇಂಡಿಯನ್, ಅರೇಬಿಯನ್, ಚೈನೀಸ್ ಫುಡ್, ಎಲ್ಲಾ ತರಹದ ಜೂಸ್ ಗಳು, ಕೂಲ್ ಡ್ರಿಂಕ್ಸ್ ಗಳು ಗ್ರಾಹಕರಿಗೆ ಲಭ್ಯವಿವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ ಅಸಾಸ್ ಎಜುಕೇಶನಲ್ ಸೆಂಟರ್ ಮಲ್ಲೂರು ಇದರ ಅಧ್ಯಕ್ಷ ಅಶ್ರಫ್ ಸಅದಿ ಮಲ್ಲೂರು, ಪ್ರಾಂಶುಪಾಲ ಸೈಯದ್ ನಿಝಾಮುದ್ದೀನ್ ಬಾಫಕಿ ತಂಙಳ್, ಕರ್ನಾಟಕ ಮುಸ್ಲಿಮ್ ಜಮಾಅತ್ ಉಪಾಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ, ಮೆಹರಾಜ್ ತಂಙಳ್, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಬಂದರ್ ಇದರ ಖತೀಬ್ ಸದಖತುಲ್ಲಾ ಫೈಝಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಪಾಣೆಮಂಗಳೂರು ಬಿ.ಎಚ್. ಕಾಂಪ್ಲೆಕ್ಸ್ ಮಾಲಕರಾದ ಬಿ.ಎಚ್.ಹಸನ್, ಅಹ್ಮದ್ ಅಕ್ಕರಂಗಡಿ, ಪ್ರಮುಖರಾದ ಮುಹಮ್ಮದ್ ಹಾಜಿ ಮಿಲನ್, ಅಬೂಬಕ್ಕರ್ ಬಿಕರ್ನಕಟ್ಟೆ, ಕುಟುಂಬಸ್ಥರು, ಮಿತ್ರರು, ಊರಿನ ನಾಗರಿಕರು ಮೊದಲಾದವರು ಉಪಸ್ಥಿತರಿದ್ದರು.









