ಶಿಕ್ಷಕರ ನೇಮಕಗೊಳಿಸಲು ಒತ್ತಾಯ : ಮೂಡಬಿದ್ರೆ ಕ್ಷೇತ್ರ ಶಿಕ್ಷಣ ಅಧಿಕಾರಿಗೆ ಎಸ್ಡಿಪಿಐ ಮನವಿ

ಮೂಡಬಿದ್ರೆ: ಕೋಟೆಬಾಗಿಲುನಲ್ಲಿರುವ ದ.ಕ.ಜಿಲ್ಲಾ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರವುಗೊಂಡಿರುವ ಉರ್ದು ಶಿಕ್ಷಕರ ಸ್ಥಾನಕ್ಕೆ ತುರ್ತಾಗಿ ಶಿಕ್ಷಕರನ್ನು ನೇಮಕಗೊಳಿಸಲು ಆಗ್ರಹಿಸಿ ಕ್ಷೇತ್ರ ಶಿಕ್ಷಣ ಅಧಿಕಾರಿಗೆ ಎಸ್.ಡಿ.ಪಿ.ಐ ಮೂಡಬಿದ್ರೆ ವಲಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮುಲ್ಕಿ- ಮೂಡಬಿದ್ರೆ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಆಸಿಫ್ ಕೋಟೆಬಾಗಿಲು, ಸಮಿತಿ ಸದಸ್ಯರಾದ ಇಬ್ರಾಹಿಂ ಹಂಡೇಲು, ಪಿಎಫ್ಐ ಮೂಡಬಿದ್ರೆ ಡಿವಿಝನ್ ಅಧ್ಯಕ್ಷರಾದ ನಾಸಿರ್ ಬೆಳುವಾಯಿ, ಶೆಹರಾಝ್, ಅನ್ವರ್ ಗಂಟಲ್ಕಟ್ಟೆ, ಅಶ್ರಫ್ ಉಪಸ್ಥಿತರಿದ್ದರು.
Next Story





