ಕಾಪು: ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅವಯವ ಉಪಕರಣಗಳ ವಿತರಣೆ

ಕಾಪು: ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್, ಕೃತಕ ಅಂಗಾಂಗ ತಯಾರಿಕಾ ಸಂಸ್ಥೆ (ಅಲಿಂಕೋ), ಉಡುಪಿ ಜಿಲ್ಲಾಡಳಿತ, ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ, ರೆಡ್ ಕ್ರಾಸ್ ಸೊಸೈಟಿ ಉಡುಪಿ ಮತ್ತು ಜೆಸಿಐ ಕಾಪು ಇವರ ಸಹಯೋಗದಲ್ಲಿ ಗುರುವಾರ ಕಾಪು ಜೇಸಿಐ ಭವನದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅವಯವ ಉಪಕರಣಗಳ ವಿತರಣಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಎರ್ಮಾಳು ಮಾತನಾಡಿ, ಅಂಗವೈಕಲ್ಯ ಶಾಪವಲ್ಲ. ಅದೂ ಕೂಡಾ ವರವೇ ಆಗಿದೆ. ವಿಕಲಚೇತನರನ್ನು ಯಾರೂ ನಿರ್ಲಕ್ಷಿಸಬಾರದು. ವಿಕಲಚೇತನರು ಸಾಕಷ್ಟು ಪ್ರತಿಭಾ ಸಂಪನ್ನರಾಗಿದ್ದು, ಬಹಳಷ್ಟು ಕಡೆಗಳಲ್ಲಿ ಸಾಧನೆಯ ಮುಂಚೂಣಿಯಲ್ಲಿದ್ದಾರೆ. ಸಮಾಜದಲ್ಲಿರುವ ಹಿರಿಯರು ಮತ್ತು ವಿಕಲಚೇತರರನ್ನು ಗೌರವಿಸಿ ಅವರ ಸೇವೆಗೈಯ್ಯುವ ಮನಸ್ಸುಗಳು ಇನ್ನಷ್ಟು ಮುಂದೆ ಬರುವಂತಾಗಬೇಕು ಎಂದರು.
ಉಡುಪಿ ಜಿಲ್ಲಾ ಅಂಗವಿಕಲ ಕಲ್ಯಾಣಾ„ಕಾರಿ ಚಂದ್ರ ನಾಯಕ್ ಮಾತನಾಡಿ, ಎಂ.ಆರ್.ಪಿ.ಎಲ್ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಒಟ್ಟು ಆರು ತಾಲೂಕುಗಳಲ್ಲಿ ವಿಕಲಾಂಗರನ್ನು ಗುರುತಿಸಿ, ಅವರಿಗೆ ಅಗತ್ಯವಿರುವ ಕೃತಕ ಅವಯವಗಳ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆಗಳಲ್ಲಿನ 512 ಮಂದಿ ಫಲಾನುಭವಿಗಳಿಗೆ 45 ಲಕ್ಷ ರೂ ವೆಚ್ಚದ ಸಲಕರಣೆಗಳ ವಿತರಿಸಲಾಗಿದ್ದು, ಕಾಪು ತಾಲೂಕಿನ 25 ಮಂದಿ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಉಪಕರಣಗಳನ್ನು ವಿತರಿಸಲಾಗುತ್ತಿದೆ ಎಂದರು.
ಕಾಪು ಪುರಸಭೆ ಸದಸ್ಯ ಸುರೇಶ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ಜೇಸಿಐ ನಿಕಟಪೂರ್ವಾಧ್ಯಕ್ಷೆ / ವಲಯಾ„ಕಾರಿ ಶಾರದೇಶ್ವರಿ ಗುರ್ಮೆ, ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ ನೋಡಲ್ ಅ„ಕಾರಿ ಸುಬ್ರಹ್ಮಣಿ ಅತಿಥಿಗಳಾಗಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಅಂಗವಿಕಲ ಕಲ್ಯಾಣಾ„ಕಾರಿ ಚಂದ್ರ ನಾಯಕ್ ಸ್ವಾಗತಿಸಿದರು. ತಾಲೂಕು ಸಂಯೋಜಕ ಮಧುಸೂಧನ್ ರಾವ್ ವಂದಿಸಿದರು. ಜೆಸಿಐ ರಾಷ್ಟ್ರೀಯ ಸಂಯೋಜಕ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.







