ಬ್ರಿಯಾನ್ ಸಹೋದರರು ಯುಎಸ್ ಓಪನ್ಗಿಂತ ಮೊದಲೇ ನಿವೃತ್ತಿ
ನ್ಯೂಯಾರ್ಕ್, ಆ.28: ಟೆನಿಸ್ ಇತಿಹಾಸದ ಅತ್ಯಂತ ಯಶಸ್ವಿ ಡಬಲ್ಸ್ ಆಟಗಾರರಾದ ಬಾಬ್ ಮತ್ತು ಮೈಕ್ ಬ್ರಿಯಾನ್ ಯುಎಸ್ ಓಪನ್ ಆರಂಭಕ್ಕೆ ಕೆಲವೇ ದಿನಗಳ ಮೊದಲು 22 ವರ್ಷಗಳ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.
1995ರಲ್ಲಿ ಯುಎಸ್ ಓಪನ್‌ನಲ್ಲಿ ಪಾದಾರ್ಪಣೆ ಮಾಡಿದ್ದ ಬ್ರಿಯಾನ್ ಸಹೋದರರು ವೃತ್ತಿಪರ ಟೆನಿಸ್‌ನಲ್ಲಿ 11 ಗ್ರಾನ್‌ಸ್ಲಾಮ್, 39 ಎಟಿಪಿ ಮಾಸ್ಟರ್ಸ್ 1000 ಮತ್ತು ಎಟಿಪಿ ಫೈನಲ್ಸ್ ಪ್ರಶಸ್ತಿಯನ್ನು 4 ಬಾರಿ ಗೆದ್ದುಕೊಂಡಿದ್ದಾರೆ. ‘‘ದೂರ ಹೋಗಲು ಇದು ಸರಿಯಾದ ಸಮಯ ಎಂದು ನಾವು ಭಾವಿಸುತ್ತೇವೆ. ನಾವು ಪ್ರವಾಸಕ್ಕೆ 20 ವರ್ಷಗಳನ್ನು ನೀಡಿದ್ದೇವೆ. ಈಗ ನಮ್ಮ ಜೀವನದ ಮುಂದಿನ ಅಧ್ಯಾಯವನ್ನು ಎದುರು ನೋಡುತ್ತಿದ್ದೇವೆ. ಇಷ್ಟು ದಿನ ಡಬಲ್ಸ್ ಆಟವನ್ನು ಆಡಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ. ವರ್ಷದ ಆರಂಭದಲ್ಲಿ ಆಟವಾಡಲು ಮತ್ತು ಅಭಿಮಾನಿಗಳಿಗೆ ನಮ್ಮ ವಿದಾಯ ಹೇಳಲು ಅವಕಾಶಗಳನ್ನು ಪಡೆದಿದ್ದಕ್ಕಾಗಿ ನಾವು ಆಭಾರಿಯಾಗಿದ್ದೇವೆ’’ ಎಂದು ಬ್ರಿಯಾನ್ ಬ್ರದರ್ಸ್ ಹೇಳಿದರು. ಅಮೆರಿಕದ ಸಹೋದರರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ್ದರು. 2007ರಲ್ಲಿ ಅಮೆರಿಕದ ಡೇವಿಸ್ ಕಪ್ ವಿಜೇತ ತಂಡದ ಭಾಗವಾಗಿದ್ದರು.





