Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ವೆರುಕಸ್ ಕಾರ್ಸಿನೋಮಾ

ವೆರುಕಸ್ ಕಾರ್ಸಿನೋಮಾ

ಡಾ. ಮುರಲೀಮೋಹನ್ ಚೂಂತಾರುಡಾ. ಮುರಲೀಮೋಹನ್ ಚೂಂತಾರು29 Aug 2020 12:10 AM IST
share

ವಿಕಾರವಾಗಿ, ಭೀಕರವಾಗಿ ಕಂಡರೂ ತನ್ನ ವರ್ತನೆಯಲ್ಲಿ ಬಹಳ ಮೃದು ಧೋರಣೆ ಹೊಂದಿರುವ ಈ ವೆರುಕಸ್ ಕಾರ್ಸಿನೋಮಾ, ತೀವ್ರತರ ಬಾಯಿ ಕ್ಯಾರ್‌ಗಿಂತ ಸಾವಿರಪಟ್ಟು ಉತ್ತಮ ಎಂಬ ಮಾತನ್ನು ಎಲ್ಲ ವೆದ್ಯರೂ ಒಮ್ಮತದಿಂದ ಒಪ್ಪುತ್ತಾರೆ.

ವೆರುಕಸ್ ಕಾರ್ಸಿನೋಮಾ ಎನ್ನುವುದು ಬಾಯಿಯೊಳಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ವಿಶೇಷವಾದ ಬಾಯಿಯ ಕ್ಯಾನ್ಸರ್ ಆಗಿದ್ದು, ಎಲ್ಲಾ ಕ್ಯಾನ್ಸರ್‌ಗಳಂತೆ ಬಹಳ ಅಪಾಯಕಾರಿಯಾಗಿ ವರ್ತಿಸುವುದಿಲ್ಲ. ನೋಡಲು ಬಹಳ ವಿಕಾರವಾಗಿ, ಅಸಹ್ಯವಾಗಿ ಕಾಣುವ ಈ ಕ್ಯಾನ್ಸರ್ ತನ್ನ ವರ್ತನೆಯಲ್ಲಿ ಅಷ್ಟೊಂದು ಭೀಕರವಾಗಿ ವರ್ತಿಸುವುದಿಲ್ಲ. ಇತರ ಬಾಯಿಯ ಕ್ಯಾನ್ಸರ್‌ಗಳಿಗಿಂತ ವಿಭಿನ್ನವಾಗಿ ವರ್ತಿಸುವ ಮತ್ತು ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸುವ ಗುಣವನ್ನು ಈ ವೆರುಕಸ್ ಕಾರ್ಸಿನೋಮಾ ಹೊಂದಿರುತ್ತದೆ. ಹೆಚ್ಚಾಗಿ ತಂಬಾಕು ಸೇವಿಸುವವರಲ್ಲಿ ಮತ್ತು ನಶ್ಯವನ್ನು ಬಳಸುವವರಲ್ಲಿ ಕಾಣಿಸಿಕೊಳ್ಳುವ ಕಾರಣದಿಂದ ಸ್ನಿಫ್ ಡಿಪ್ಪರ್ಸ್‌ ಕ್ಯಾನ್ಸರ್ ಎಂದೂ ಅನ್ವರ್ಥ ನಾಮವನ್ನು ಪಡೆದಿದೆ.

ರೋಗದ ಲಕ್ಷಣಗಳು ಏನು?

1. ಸಾಮಾನ್ಯವಾಗಿ 60 ವಯಸ್ಸಿನವರಿಗಿಂತ ಮೇಲ್ಪಟ್ಟವರಲ್ಲಿ ಹೆಚ್ಚು ಕಾಣಿಸುತ್ತದೆ.

2. ಪುರುಷರಲ್ಲಿ ಜಾಸ್ತಿ ಕಂಡುಬರುತ್ತದೆ.

3. ವಸಡು, ಕೆನ್ನೆಯ ಒಳಭಾಗ, ದವಡೆಯ ಮೇಲ್ಭಾಗ, ನಾಲಗೆಯ ಕೆಳಭಾಗ ಮತ್ತು ಬಾಯಿಯ ಮೇಲಂಗಳದಲ್ಲಿ ಹೆಚ್ಚು ಕಾಣಿಸುತ್ತದೆ. ನಾಲಗೆಯಲ್ಲಿ ಕಂಡುಬರುವುದು ಬಹಳ ಅಪರೂಪ. ಜನನಾಂಗ, ವೃಷಣ, ಅನ್ನನಾಳ, ಧ್ವನಿನಾಳಗಳಲ್ಲಿಯೂ ಕಂಡು ಬರುವ ಸಾಧ್ಯತೆ ಇದೆ.

4. ಬಹಳ ನಿಧಾನವಾಗಿ ಬೆಳೆಯುತ್ತದೆ ಮತ್ತು ದೊಡ್ಡದಾದ ಜಾಗವನ್ನು ಆವರಿಸಿಕೊಂಡು ಗಡ್ಡೆಯ ರೂಪದಲ್ಲಿ ಹೊರಭಾಗಕ್ಕೆ ಚಾಚಿಕೊಂಡು ಬೆಳೆಯುತ್ತದೆ. ಸಾಮಾನ್ಯವಾಗಿ ಬಿಳಿಯಾದ ದೊಡ್ಡ ಕಲೆಗಳ ನಡುವೆ ಈ ಬೆಳವಣಿಗೆ ಕಂಡುಬರುತ್ತದೆ.

5. ಸುತ್ತಲಿನ ಎಲುಬು ಮತ್ತು ಕಾರ್ಟಲೇಜ್‌ಗಳಿಗೆ ಬಹಳ ಬೇಗ ಅವರಿಸಿಕೊಳ್ಳುತ್ತದೆ. ಗಡ್ಡೆಯ ಕೆಳಭಾಗದ, ಎಲುಬಿನ ಹೊರಭಾಗದ ಪೆರಿಯೋಸ್ಟಿಯಮ್ ಪದರಕ್ಕೆ ಬೇಗನೆ ಹರಡಿಕೊಂಡು ಎಲುಬನ್ನು ನಾಶ ಪಡಿಸುತ್ತದೆ.

6. ಕುತ್ತಿಗೆಯಲ್ಲಿನ ಲಿಂಪ್ ಗ್ರಂಥಿಗಳು ದೊಡ್ಡದಾಗುತ್ತವೆೆ. ಈ ಗ್ರಂಥಿಗಳು ಮುಟ್ಟುವಾಗ ನೋವುಂಟು ಮಾಡುತ್ತವೆೆ.

7. ಗಡ್ಡೆಯ ನಡುವೆ ಪದರಗಳ ಅಥವಾ ಹಾಳೆಗಳ ನಡುವೆ ಕಣಿವೆಯೂ ಇರುತ್ತದೆ.

8. ಮಾತನಾಡಲು ಕಷ್ಟವಾಗುತ್ತದೆ ಮತ್ತು ಆಹಾರ ಸೇವಿಸಲು ಕಷ್ಟವಾಗುತ್ತದೆ.

ಇತರ ಬಾಯಿ ಕ್ಯಾನ್ಸರ್‌ಗಿಂತ

ಹೇಗೆ ಬಿನ್ನವಾಗಿರುತ್ತದೆ?

1. ಬಾಯಿ ಕ್ಯಾನ್ಸರ್ ಬಹಳ ಬೇಗನೆ ಮೆಟಾಸ್ಟಾಸಿಸ್ ಎಂಬ ಪ್ರಕ್ರಿಯೆ ಮುಖಾಂತರ ದೂರದ ಅಂಗಗಳಿಗೆ ರಕ್ತನಾಳದ ಮುಖಾಂತರ ಅಥವಾ ಲಿಂಫ್ ದ್ರವದ ಮುಖಾಂತರ ಹರಡುತ್ತದೆ. ಆದರೆ ವೆರುಕಸ್ ಕಾರ್ಸಿನೋಮಾ ದೂರದ ಅಂಗಾಂಶಗಳಿಗೆ ಹರಡುವುದೇ ಇಲ್ಲ.

2. ವೆರುಕಸ್ ಕಾರ್ಸಿನೋಮಾ 50-60ರ ಹರೆಯದಲ್ಲಿ ಬರುತ್ತದೆ. ಆದರೆ ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್‌ಗಳು 30-40ರ ವಯಸ್ಸಿನಲ್ಲಿಯೇ ಈಗೀಗ ಕಾಣಿಸಿಕೊಳ್ಳುತ್ತವೆ.

3. ಬಾಯಿ ಕ್ಯಾನ್ಸರ್‌ಗೆ ಸರ್ಜರಿ ಮತ್ತು ರೇಡಿಯೊಥೆರಫಿ ಅತೀ ಅವಶ್ಯಕ. ಆದರೆ ವೆರುಕಸ್ ಕಾರ್ಸಿನೋಮಾ ಕಾಯಿಲೆಗೆ ಬರೀ ಸರ್ಜರಿ ಸಾಕಾಗುತ್ತದೆ. ರೇಡಿಯೊಥೆರಫಿಯ ಮತ್ತು ಕಿಮೋಥೆರಫಿ ಅಗತ್ಯವೂ ಇರುವುದಿಲ್ಲ.

4. ನೂರರಲ್ಲಿ 99 ಮಂದಿ ವೆರುಕಸ್ ಕಾರ್ಸಿನೋಮಾ ರೋಗಿಗಳು, ಸರ್ಜರಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಾರೆ ಮತ್ತು ಉತ್ತಮ ಫಲಿತಾಂಶ ಪಡೆಯುತ್ತಾರೆ. ಆದರೆ ಬಾಯಿ ಕ್ಯಾನ್ಸರ್ ರೋಗಿಗಳ ಸ್ಪಂದನೆ, ಕ್ಯಾನ್ಸರ್ ಎಲ್ಲಿ ಹುಟ್ಟಿದೆ, ಎಷ್ಟು ದೊಡ್ಡದಾಗಿದೆ ಮತ್ತು ಯಾವಾಗ ಚಿಕಿತ್ಸೆ ನೀಡಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.

5. ವೆರುಕಸ್ ಕಾರ್ಸಿನೋಮಾ ಎಷ್ಟೇ ದೊಡ್ಡದಾಗಿ ಬೆಳೆದರೂ ಯಾವುದೇ ತೊಂದರೆಯಾಗದು. ಆದರೆ ಬಾಯಿಯ ಕ್ಯಾನ್ಸರ್‌ನ ಗಾತ್ರ ಜಾಸ್ತಿಯಾದಷ್ಟೂ ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ.

ಪತ್ತೆ ಹಚ್ಚುವುದು ಹೇಗೆ?

ಬಯಾಪ್ಸಿ ಪರೀಕ್ಷೆ ಮುಖಾಂತರ ನುರಿತ ರೋಗ ಪರೀಕ್ಷಕ ವೈದ್ಯರು ಪತ್ತೆ ಹಚ್ಚುತ್ತಾರೆ. ರೋಗ ಪೀಡಿತ ಮಾಂಸದ ಜೊತೆಗೆ ಪಕ್ಕದ ಸಹಜ ಬಾಯಿಯ ಭಾಗವನ್ನೂ ಬಯಾಪ್ಸಿ ಸಮಯದಲ್ಲಿ ಸೇರಿಸಿ ತೆಗೆಯಲಾಗುತ್ತದೆ. ಬರೀ ಸರ್ಜರಿಯ ಮುಖಾಂತರ ಚಿಕಿತ್ಸೆ ನೀಡುವ ಕಾರಣದಿಂದ ಸಂಶಯವಿದ್ದಲ್ಲಿ ಎರಡನೇ ಬಾರಿ ಬಯಾಪ್ಸಿ ಮಾಡುವಲ್ಲಿ ತಪ್ಪೇನಿಲ್ಲ. ರೋಗದ ಲಕ್ಷಣಗಳು, ರೋಗದ ಚರಿತ್ರೆ ಮತ್ತು ಬಯಾಪ್ಸಿ ಫಲಿತಾಂಶ ತಾಳೆ ಹಾಕಿ ರೊಗ ನಿರ್ಣಯ ಮಾಡಲಾಗುತ್ತದೆ.

ಚಿಕಿತ್ಸೆ ಹೇಗೆ?

ವೆರುಕಸ್ ಕಾರ್ಸಿನೋಮಾ ಸರ್ಜರಿಗೆ ಸೂಕ್ತವಾಗಿ ಸ್ಪಂದಿಸುವ ಕ್ಯಾನ್ಸರ್ ಆಗಿರುತ್ತದೆ. ಎಷ್ಟೇ ದೊಡ್ಡದಾಗಿ ಬೆಳೆದರೂ ಸುತ್ತಲಿನ ಸಹಜ ಭಾಗವನ್ನು ಸೇರಿಸಿ ಸಂಪೂರ್ಣವಾಗಿ ರೋಗ ಪೀಡಿತ ಭಾಗವನ್ನು ನಿರ್ಮೂಲನ ಮಾಡಲಾಗುತ್ತದೆ. ಒಮ್ಮೆ ಸರ್ಜರಿ ಮಾಡಿದ ಭಾಗದಲ್ಲಿ ಮಗದೊಮ್ಮೆ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಈ ವೆರುಕಸ್ ಕಾರ್ಸಿನೋಮಾದ ಗಡ್ಡೆಯು, ತೀವ್ರತರವಾದ ಬಾಯಿ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ. ಪ್ರತಿ 6 ತಿಂಗಳಿಗೊಮ್ಮೆ ವೈದ್ಯರ ಭೇಟಿ ಅತೀ ಅಗತ್ಯ. ಆದರೆ ಬಾಯಿ ಕ್ಯಾನ್ಸರ್‌ಗೆ ಮಾಡುವ, ಕುತ್ತಿಗೆಯ ಭಾಗದಲ್ಲಿನ ಲಿಂಪ್ ಗ್ರಂಥಿಗಳನ್ನು ತೆಗೆಯುವ ಸರ್ಜರಿ, ಈ ವೆರುಕಸ್ ಕಾರ್ಸಿನೋಮಾ ರೋಗಕ್ಕೆ ಅಗತ್ಯವಿರುವುದಿಲ್ಲ. ನೋಡಲು ವಿಕಾರವಾಗಿ, ಭೀಕರವಾಗಿ ಕಂಡರೂ ತನ್ನ ವರ್ತನೆಯಲ್ಲಿ ಬಹಳ ಮೃದು ಧೋರಣೆ ಹೊಂದಿರುವ ಈ ವೆರುಕಸ್ ಕಾರ್ಸಿನೋಮಾ, ತೀವ್ರತರ ಬಾಯಿ ಕ್ಯಾನ್ಸರ್‌ಗಿಂತ ಸಾವಿರಪಟ್ಟು ಉತ್ತಮ ಎಂಬ ಮಾತನ್ನು ಎಲ್ಲ ವೈದ್ಯರೂ ಒಮ್ಮತದಿಂದ ಒಪ್ಪುತ್ತಾರೆ. ತಂಬಾಕು ಉತ್ಪನ್ನಗಳನ್ನು ಬಹಿಷ್ಕರಿಸಿ ಈ ವೆರುಕಸ್ ಕಾರ್ಸಿನೋಮಾ ಎಂಬ ರೋಗ ಬಾರದಂತೆ ತಡೆಗಟ್ಟುವುದರಲ್ಲಿಯೇ ಜಾಣತನ ಅಡಗಿದೆ.

share
ಡಾ. ಮುರಲೀಮೋಹನ್ ಚೂಂತಾರು
ಡಾ. ಮುರಲೀಮೋಹನ್ ಚೂಂತಾರು
Next Story
X