ಬೆಂಗಳೂರು: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಮೃತ್ಯು
![ಬೆಂಗಳೂರು: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಮೃತ್ಯು ಬೆಂಗಳೂರು: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಮೃತ್ಯು](https://www.varthabharati.in/sites/default/files/images/articles/2020/08/29/256909-1598700349.jpg)
ಬೆಂಗಳೂರು, ಆ.29: ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಗರದ ಹೆಣ್ಣೂರು ಬಸ್ ಘಟಕ ಹಿಂಭಾಗದಲ್ಲಿನ 3ನೇ ಬ್ಲಾಕ್, ಎಚ್ಬಿಆರ್ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ಅಶ್ವಿನ್(5) ಮೃತ ಮಗು ಎಂದು ತಿಳಿದುಬಂದಿದೆ.
ಆ.28ರ ಸಂಜೆ ಅಶ್ವಿನ್ ಆಟ ಆಡುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ನಂತರ ನಾಪತ್ತೆಯಾದ ಬಾಲಕನಿಗಾಗಿ ಪೋಷಕರು ಎರಡು ಗಂಟೆಗಳ ಕಾಲ ಹುಡುಕಾಡಿದ್ದಾರೆ. ಬಳಿಕ ಪಕ್ಕದಲ್ಲೇ ಇದ್ದ ಬಾವಿ ನೋಡಿದಾಗ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದ್ದು, ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
Next Story