ಸೆ.1-2: ನೀರು ಸರಬರಾಜು ಸ್ಥಗಿತ
ಮಂಗಳೂರು, ಆ.29: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್ವೆಲ್ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಮತ್ತು ಜಾಕ್ ವೆಲ್ ಶುಚಿಗೊಳಿಸಲು ಸೆ.1ರಂದು ಬೆಳಗ್ಗೆ 6ರಿಂದ ಸೆ.2ರ ಬೆಳಗ್ಗೆ 6 ಗಂಟೆಯವರೆಗೆ 24 ಗಂಟೆ ಅವಧಿಯಲ್ಲಿ ಸುರತ್ಕಲ್ ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್ಐಟಿಕೆ, ಸಸಿಹಿತ್ಲು, ಕೂಳೂರು, ಕೊಟ್ಟಾರ ಭಾಗಶಃ ಬೆಂದೂರು ಲೋ ಲೆವೆಲ್ ಪ್ರದೇಶಗಳಾದ ಕಾರ್ಸ್ಟ್ರೀಟ್, ಕುದ್ರೋಳಿ ಫಿಷಿಂಗ್ ಹಾರ್ಬರ್, ಕೊಡಿಯಾಲ್ಬೈಲ್ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು ಎಂದು ಮನಪಾ ಕಾರ್ಯಪಾಲಕ ಅಭಿಯಂತರರರ ಪ್ರಕಟನೆ ತಿಳಿಸಿದೆ.
Next Story