ಬೆಳ್ತಂಗಡಿ: ಯುವತಿಗೆ ಕಿರುಕುಳ ಯತ್ನ ; ಆರೋಪಿ ಸೆರೆ
ಬೆಳ್ತಂಗಡಿ : ಉಜಿರೆ ಗ್ರಾಮದ ಕಡಂಬಿಲ ಎಂಬಲ್ಲಿ ಆಡು ಮೇಯಿಸುತ್ತಿದ್ದ ಯುವತಿಯೋರ್ವಳ ಮೇಲೆ ಬೆಳ್ತಂಗಡಿ ಕೊಯ್ಯೂರು ನಿವಾಸಿ ಇಕ್ಬಾಲ್ ಸಾದಿಕ್(27) ಎಂಬಾತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾದ ಘಟನೆ ಶನಿವಾರ ನಡೆದಿದೆ.
ಆಯ ಯುವತಿ ಬಳಿ ಅಸಭ್ಯವಾಗಿ ವರ್ತಿಸಿದ್ದರಿಂದ ಪ್ರತಿರೋಧ ತೋರಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ್ದಾನೆ. ಸ್ಥಳೀಯರು ಯುವತಿ ಕೂಗು ಕೇಳಿ ಓಡಿ ಬಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಯುವತಿ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಳ್ತಂಗಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story





