ಸಂಸದ ಜಿಗಜಿಣಗಿ ಹೊಸ ಮನೆಗೆ ಪಟೇಲ್, ಹೆಗಡೆ ಹೆಸರು ನಾಮಕರಣ

ವಿಜಯಪುರ, ಆ.29: ನನಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರ ಹೆಸರನ್ನು ನಾನು ಕಟ್ಟಿಸಿರುವ ಹೊಸ ಮನೆಗೆ ನಾಮಕರಣ ಮಾಡಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಶನಿವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರು ನನ್ನ ಪಾಲಿನ ನಾಯಕರು. ಅವರ ಸ್ಮರಣೆಗಾಗಿ ನನ್ನ ಮನೆಗೆ ಅವರ ಹೆಸರನ್ನು ನಾಮಕರಣ ಮಾಡಿದ್ದೇನೆ ಎಂದರು.
ನನಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟು ನನ್ನನ್ನು ಬೆಳೆಸಿದ್ದಾರೆ. ಹೊಸ ಮನೆ ನಿರ್ಮಿಸಿ ಆರೇಳು ತಿಂಗಳಾಗಿತ್ತು. ಇಂದು ರಾಮಕೃಷ್ಣ ಹೆಗಡೆ ಅವರ ಜನುಮ ದಿನವಾದ ಕಾರಣ ಒಳ್ಳೆಯ ದಿನವೆಂದು ಪೂಜೆ ಮಾಡಿ, ನಾಮ ಫಲಕ ಅಳವಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಶಿಲೆಯಲ್ಲಿ ಇಬ್ಬರ ಹೆಸರನ್ನು ಕೆತ್ತಿಸಲಾಗುವುದು ಎಂದು ತಿಳಿಸಿದರು.
Next Story





