ಜೂಜು ಕ್ಲಬ್ ಮೇಲೆ ಸಿಸಿಬಿ ದಾಳಿ: 21 ಆರೋಪಿಗಳ ಬಂಧನ
![ಜೂಜು ಕ್ಲಬ್ ಮೇಲೆ ಸಿಸಿಬಿ ದಾಳಿ: 21 ಆರೋಪಿಗಳ ಬಂಧನ ಜೂಜು ಕ್ಲಬ್ ಮೇಲೆ ಸಿಸಿಬಿ ದಾಳಿ: 21 ಆರೋಪಿಗಳ ಬಂಧನ](https://www.varthabharati.in/sites/default/files/images/articles/2020/08/30/257041-1598794216.jpg)
ಬೆಂಗಳೂರು, ಆ.30: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಕ್ಲಬ್ ಮಾಲಕ ಸೇರಿ 21 ಮಂದಿಯನ್ನು ಬಂಧಿಸಿದ್ದಾರೆ.
ಇಲ್ಲಿನ ರಿಕ್ರಿಯಷನ್ ಸೆಂಟರ್ ನ ಎರಡು ಕ್ಲಬ್ಗಳ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಕ್ಲಬ್ನ ಮಾಲಕ ಮುರುಳಿ ಎಂಬಾತ ಸೇರಿ 21 ಮಂದಿಯನ್ನು ಬಂಧಿಸಲಾಗಿದೆ.
ಕಳೆದೆರಡು ದಿನಗಳ ಹಿಂದೆಯೂ ಇಂದಿರಾನಗರ ವ್ಯಾಪ್ತಿಯ ಬಳಿ ಕೆಸಿನೋ ಮೇಲೆ ಪೂರ್ವ ವಿಭಾಗ ಪೊಲೀಸರು ದಾಳಿ ನಡೆಸಿದ್ದರು. ಈ ವ್ಯಾಪ್ತಿಯಲ್ಲಿ ಬಹಳಷ್ಟು ಜೂಜಾಟ ಅಡ್ಡೆಗಳಿವೆ. ಈ ಹಿನ್ನೆಲೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ.
Next Story