ಸಮಾನತೆ, ನ್ಯಾಯಕ್ಕೆ ಇಮಾಮ್ ಹುಸೈನ್ ನೀಡಿದ ಮಹತ್ವ ಗಮನಾರ್ಹ: ಪ್ರಧಾನಿ ಮೋದಿ
ಹೊಸದಿಲ್ಲಿ, ಆ.30: ಇಮಾಮ್ ಹುಸೈನ್ ಸಮಾನತೆಗೆ ಮತ್ತು ನ್ಯಾಯಕ್ಕೆ ನೀಡಿದ ಮಹತ್ವ ಗಮನಾರ್ಹವಾಗಿದೆ. ಸತ್ಯ ಮತ್ತು ನ್ಯಾಯದ ಮೌಲ್ಯಗಳಿಗಿಂತ ಬೇರೆ ಯಾವುದೂ ಅವರಿಗೆ ಮುಖ್ಯವಾಗಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಹರ್ರಂ ಸಂದರ್ಭ ಇಮಾಮ್ ಹುಸೈನ್ ರನ್ನು ನೆನೆದ ಪ್ರಧಾನಿ ಮೋದಿ, ಇಮಾನ್ ಹುಸೈನ್ರ ಬಲಿದಾನವನ್ನು ನಾವು ಸ್ಮರಿಸಬೇಕು. ಅವರಿಗೆ ನ್ಯಾಯ ಮತ್ತು ಸತ್ಯದ ಮೌಲ್ಯಗಳೇ ಬಹಳ ಮುಖ್ಯವಾಗಿದ್ದವು. ಈ ಮೂಲಕ ಅವರು ಹಲವರಿಗೆ ಶಕ್ತಿ ತುಂಬಿದವರು ಎಂದು ಟ್ವೀಟ್ ಮಾಡಿದ್ದಾರೆ.
Next Story