ಕೊಣಾಜೆ: ಬೈಕ್ ಪಲ್ಟಿ ; ಬಾಲಕ ಮೃತ್ಯು
ಕೊಣಾಜೆ: ಪಜೀರು ಬಳಿ ಬೈಕ್ ಅಪಘಾತದಲ್ಲಿ ಬಾಲಕನೊರ್ವ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಮೃತನನ್ನು ಪಜೀರು ಪೆರ್ನಂಪ್ಪಾಡಿಯ ಬಶೀರ್ ಎಂಬವರ ಪುತ್ರ ಶಾಲಿಕ್ (15) ಎಂದು ಗುರುತಿಸಲಾಗಿದೆ.
ಶಾಲಿಕ್ ತನ್ನ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಸಂದರ್ಭ ತಲೆಗೆ ಗಂಭೀರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story