ಅಜ್ಜಿನಡ್ಕ: ನೂತನ ವಸತಿಗೃಹ ಉದ್ಘಾಟನೆ
ಮಂಗಳೂರು, ಆ.30: ಕೋಟೆಕಾರ್ ಅಜ್ಜಿನಡ್ಕದ ಬದ್ರಿಯಾ ಜುಮಾ ಮಸ್ಜಿದ್ ವತಿಯಿಂದ ನಿರ್ಮಿಸಲಾದ ನೂತನ ವಸತಿಗೃಹವನ್ನು ರವಿವಾರ ಉದ್ಘಾಟಿಸಲಾಯಿತು.
ವಸತಿಗೃಹಕ್ಕಾಗಿ ಅಹೋ ರಾತ್ರಿ ಕಾರ್ಯಾಚರಿಸಿದ ಅಬ್ದುಲ್ ಖಾದರ್ ಅವರನ್ನೊಳಗೊಂಡ ಕಟ್ಟಡದ ಗಲ್ಫ್ ಸಮಿತಿಗೆ ಹಾಗೂ ಯುಎನ್ ಅಬ್ದುಲ್ಲಾ ಹಾಜಿ ಅವರಿಗೆ ಸ್ಮರಣಿಗೆ ನೀಡಿ ಗೌರವಿಸಲಾಯಿತು. ಜಮಾಅತ್ ಖತೀಬ್ ಬಶೀರ್ ರಹ್ಮಾನಿ ಶುಭ ಹಾರೈಸಿದರು. ಜಮಾಅತ್ ಅಧ್ಯಕ್ಷ ಸುಲೈಮಾನ್ ಹಾಜಿ, ಉಪಾಧ್ಯಕ್ಷ ಯು.ಎನ್. ಅಬ್ದುಲ್ಲಾ ಹಾಜಿ, ಸಿಎಚ್ ಇಬ್ರಾಹಿಂ,ಕೋಶಾಧಿಕಾರಿ ಉಸ್ಮಾನ್ ಎಚ್‌ಐ, ಕಾರ್ಯದರ್ಶಿ ಬಶೀರ್, ಊರಿನ ಪ್ರಮುಖರಾದ ಮಜಲ್ ಅಬ್ಬಾಸ್ ಹಾಜಿ, ಯುಬಿ ಮುಹಮ್ಮದ್ ಹಾಜಿ, ಅಬ್ಬಾಸ್ ಹಾಜಿ ಉಪಸ್ಥಿತರಿದ್ದರು.
ಜಮಾಅತ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಸ್ವಾಗತಿಸಿದರು. ಕಾರ್ಯದರ್ಶಿ ಮುಸ್ತಫ ಕೆ.ಪಿ. ವಂದಿಸಿದರು.
Next Story





