ಗಾಂಜಾ ಮಾರಾಟ, ಸೇವನೆ ಆರೋಪ : ಐವರ ಬಂಧನ
ಪಡುಬಿದ್ರಿ: ಇಲ್ಲಿನ ವಸತಿ ಸಂಕೀರ್ಣಕ್ಕೆ ದಾಳಿ ನಡೆಸಿದ ಪೊಲೀಸರು ಗಾಂಜಾ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿ ಐವರನ್ನು ಬಂಧಿಸಿದ್ದಾರೆ.
ಬಂಧಿತರು ನಡ್ಸಾಲು ಗ್ರಾಮದ ನಿವಾಸಿ ಬಿಲಾಲ್ ಮೆಕಾಯ್ (20), ಪಯ್ಯನ್ನೂರು ಕುಂಞಿಮಂಗಳಂ ನಿವಾಸಿ ಅಭಿನವ್ ಸುರೇಂದ್ರನ್ (21), ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಪ್ರವೇಶ್ ಪಿ ಶೆಟ್ಟಿ (22), ಕಾಸರಗೋಡಿನ ಪುಲ್ಲೂರು ಪೆರಿಯಾ ಗ್ರಾಮದ ನಿವಾಸಿ ಶಾಸಿಲ್ ಅಹ್ಮದ್ (23), ಮಲಪ್ಪುರುಂ ಜಿಲ್ಲೆಯ ತಿರೂರು ಗ್ರಾಮ, ತಿರಂಙಡಿಯ ಅಲ್ ಜಾಸಿಮ್ ಸಿ.ಕೆ (22) ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿದ್ದ ಸುಮಾರು 16,000 ರೂ. ಮೌಲ್ಯದ ಗಾಂಜಾ ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





