ನಿಗೂಢ ನಾಪತ್ತೆ ಪ್ರಕರಣ ಸುಖಾಂತ್ಯ: ಹನೂರಿನ ಚರ್ಚ್ ಫಾದರ್ ಬೆಂಗಳೂರಿನಲ್ಲಿ ಪತ್ತೆ
ಚಾಮರಾಜನಗರ, ಆ.30: ನಾಪತ್ತೆಯಾಗಿದ್ದ ಚಾಮರಾಜನಗರ ಜಿಲ್ಲೆಯ ಹನೂರುತಾಲೂಕಿನ ಕೌದಳ್ಳಿ ಚರ್ಚ್ ಫಾದರ್ ಸಂತೋಷ್ ಜೋಷಿ ಶನಿವಾರ ಪತ್ತೆಯಾಗಿದ್ದು, ನಿಗೂಢ ನಾಪತ್ತೆ ಪ್ರಕರಣಕ್ಕೆ ಸುಖಾಂತ್ಯ ಕಂಡಿದೆ.
ಕೌದಳ್ಳಿ ಚರ್ಚ್ ಫಾದರ್ ಸಂತೋಷ್ ಜೋಷಿ ನಿಗೂಡವಾಗಿ ನಾಪತ್ತೆಯಾಗಿರುವ ಬಗ್ಗೆ ಮೈಸೂರು ಕ್ರೈಸ್ತ ಧರ್ಮಾಧ್ಯಕ್ಷ ಎ.ಕೆ. ವಿಲಿಯಂ ಸುತ್ತೋಲೆಯನ್ನು ಹೊರಡಿಸಿದ್ದರು, ಆ ಬಳಿಕ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆದಿತ್ತು.
ಪ್ರಕರಣ ದಾಖಲಿಸಿಕೊಂಡ ರಾಮಾಪುರ ಪೊಲೀಸರು ಫಾ.ಸಂತೋಷ್ ಜೋಷಿ ಪತ್ತೆಗೆ ತಂಡ ರಚಿಸಿದ್ದು, ಕೊನೆಗೂ ಬೆಂಗಳೂರಿನಲ್ಲಿ ಪತ್ತೆ ಮಾಡಿ ಶನಿವಾರ ಪೊಲೀಸ್ ಠಾಣೆಗೆ ಕರೆ ತಂದರು. ದೂರು ನೀಡಿದ್ದ ಪೋಷಕರನ್ನು ಕರೆಯಿಸಿದ ಪೊಲೀಸರು, ಸಂತೋಷ್ ಜೋಷಿಯವರನ್ನು ಪೋಷಕರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
Next Story





