Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಅನಾಥಾಶ್ರಮದಿಂದ ‘ಹಾಲ್ ಆಫ್ ಫೇಮ್’ ತನಕ...

ಅನಾಥಾಶ್ರಮದಿಂದ ‘ಹಾಲ್ ಆಫ್ ಫೇಮ್’ ತನಕ ಲಿಸಾ ಪಯಣ

ವಾರ್ತಾಭಾರತಿವಾರ್ತಾಭಾರತಿ30 Aug 2020 11:23 PM IST
share
ಅನಾಥಾಶ್ರಮದಿಂದ ‘ಹಾಲ್ ಆಫ್ ಫೇಮ್’ ತನಕ ಲಿಸಾ ಪಯಣ

ಹೊಸದಿಲ್ಲಿ, ಆ.30: ಪ್ರತಿ ಯಶಸ್ಸಿನ ಹಿಂದೆಯೂ ಕತೆ ಇರುತ್ತದೆ. ಈ ಮಾತು ಹೆಚ್ಚಿನ ಕ್ರೀಡಾಪಟುಗಳ ಜೀವನದಲ್ಲಿ ಬೆಸೆದುಕೊಂಡಿರುತ್ತದೆ. ಹಿಂದಿನ ಮತ್ತು ಈಗಿನ ಕೆಲವು ಕ್ರೀಡಾಪಟುಗಳು ಬಹಳ ಕಠಿಣ ಶ್ರಮದ ಮೂಲಕ ಗುರಿ ತಲುಪಿದ್ದಾರೆ. ಆ ರೀತಿ ಮೇಲೆ ಬಂದವರು ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಾಲೇಕರ್. ಅವರು ಇತ್ತೀಚೆಗೆ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿದ್ದರು. ಆದರೆ ಈ ಮಟ್ಟಕ್ಕೆ ಬೆಳೆಯುವಲ್ಲಿ ಅವರ ಸಾಧನೆ ಹಾದಿ ಹೆಚ್ಚು ಆಸಕ್ತಿದಾಯಕವಾಗಿದೆ.

2005 ಮತ್ತು 2013ರಲ್ಲಿ ಏಕದಿನ ವಿಶ್ವಕಪ್ , 2010 ಮತ್ತು 2013ರಲ್ಲಿ ಟ್ವೆಂಟಿ 20 ವಿಶ್ವಕಪ್ ವಿಜೇತ ತಂಡದ ಸದಸ್ಯೆ ಲಿಸಾ ಸ್ಥಾಲೇಕರ್ ಭಾರತದ ಪುಣೆ ಮೂಲದವರು. 1978ರಲ್ಲಿ ಲಿಸಾರನ್ನು ಆಕೆಯ ಪೋಷಕರು ಭಾರತದ ಅನಾಥಾಶ್ರಮದಿಂದ ದತ್ತು ಪಡೆದಿದ್ದರು. ಆಗ ಲಿಸಾ ಜನಿಸಿ ಎರಡು ವಾರವಾಗಿತ್ತು. ದತ್ತುಪುತ್ರಿಯಾಗಿ ಅಮೆರಿಕದ ದಂಪತಿ ಮಡಿಲು ಸೇರಿದ ಲಿಸಾ ಬದುಕು ಬದಲಾಯಿತು. ಹೆತ್ತವರು ಆಕೆಯನ್ನು ಅನಾಥಾಶ್ರಮಕ್ಕೆ ಸೇರಿಸಿದ್ದರು. ಅವರ ಮೂಲ ಹೆಸರು ಲೈಲಾ. ಅಮೆರಿಕದ ದಂಪತಿ ಗಂಡು ಮಗುವನ್ನು ದತ್ತು ಪಡೆಯಲು ಅನಾಥಾಶ್ರಮಕ್ಕೆ ಭೇಟಿ ನೀಡಿದ್ದರು. ಮಗು ಲಿಸಾ ಅವರ ಗಮನ ಸೆಳೆದಿತ್ತು. ದತ್ತು ಪಡೆಯಲು ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಆಕಯನ್ನು ಅಮೆರಿಕ ದಂಪತಿ ತಮ್ಮ ದೇಶಕ್ಕೆ ಕೆರದೊಯ್ದರು. ಅಮೆರಿಕ ಮತ್ತು ಕೀನ್ಯಾದಲ್ಲಿ ನಾಲ್ಕು ವರ್ಷಗಳ ಕಾಲ ನೆಲೆಸಿದ್ದ ಆ ಕುಟುಂಬವು ಬಳಿಕ ಆಸ್ಟ್ರೇಲಿಯಕ್ಕೆ ತೆರಳಿತ್ತು.ಆಸ್ಟೇಲಿಯದಲ್ಲಿ ಬೆಳೆದ ಲಿಸಾ ಬಳಿಕ ಕ್ರಿಕೆಟ್‌ನತ್ತ ಗಮನ ಹರಿಸಿ ವಿಶ್ವದ ಓರ್ವ ಆಲ್‌ರೌಂಡರ್ ಆಗಿ ಬೆಳೆದರು. 2001ರಿಂದ 2013ರ ತನಕ ಆಸ್ಟ್ರೇಲಿಯವನ್ನು 187 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಲಿಸಾ 8 ಟೆಸ್ಟ್‌ಗಳಲ್ಲಿ 1 ಶತಕ 2 ಅರ್ಧಶತಕಗಳನ್ನು ಒಳಗೊಂಡ 416 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 120, ಮತ್ತು 23 ವಿಕೆಟ್. 125 ಏಕದಿನ ಪಂದ್ಯಗಳಲ್ಲಿ 2,298 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 104, 2 ಶತಕ ,16 ಅರ್ಧಶತಕ ಮತ್ತು 146 ವಿಕೆಟ್, 54 ಟ್ವೆಂಟಿ-20 ಪಂದ್ಯಗಳಲ್ಲಿ 769 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ 52, ಅರ್ಧಶತಕ 1 ಮತ್ತು 60 ವಿಕೆಟ್ ಪಡೆದಿದ್ದಾರೆ.

ತನ್ನನ್ನು ಆಟಕ್ಕೆ ಪರಿಚಯಿಸಿದ ಕೀರ್ತಿ ತನ್ನ ತಂದೆಗೆ ಸಲ್ಲುತ್ತದೆ ಎಂದು ಲಿಸಾ ಹೇಳಿದ್ದಾರೆ.

2012ರಲ್ಲಿ ಲಿಸಾ ತಾನು ಮಗುವಾಗಿದ್ದಾಗ ಆಶ್ರಯ ನೀಡಿದ್ದ ಪುಣೆಯ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X