ಕಮ್ಯುನಿಟಿ ಶೀಲ್ಡ್ ಬಾಚಿಕೊಂಡ ಆರ್ಸೆನಲ್

ಲಂಡನ್, ಆ.30: ಲಿವರ್ಪೂಲ್‌ನ್ನು 5-4 ಅಂತರದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಕೆಡವಿದ ಆರ್ಸೆನಲ್ ಕಮ್ಯುನಿಟಿ ಶೀಲ್ಡ್‌ನ್ನು ವಶಪಡಿಸಿಕೊಂಡಿದೆ.
ವೆಂಬ್ಲಿಯಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 1-1 ಗೋಲುಗಳಿಂದ ಡ್ರಾ ಸಾಧಿಸಿದ್ದವು. ಅನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಆರ್ಸೆನಲ್ ಗೆಲುವಿನ ಗೆಲುವಿನ ನಗೆ ಬೀರಿತು.
ಬೇಸಿಗೆಯ ವಿರಾಮದ ನಂತರ ಆರು ವಾರಗಳ ಅಂತರದಲ್ಲಿ ಉತ್ತರ ಲಂಡನ್ ತಂಡವು ಲೀಗ್ ಚಾಂಪಿಯನ್ ವಿರುದ್ಧ ಎರಡನೇ ಜಯವನ್ನು ಪೂರ್ಣಗೊಳಿಸಿತು.
ಆಗಸ್ಟ್ 1ರಂದು ಚೆಲ್ಸಿಯಾ ವಿರುದ್ಧದ ಎಫ್‌ಎ ಕಪ್ ಫೈನಲ್ ಗೆಲುವಿನ ನಂತರ ಆರ್ಸೆನಲ್ ತನ್ನ ಎರಡನೇ ಟ್ರೋಫಿಯನ್ನು ಬಾಚಿಕೊಂಡಿತು.
Next Story





