ಸೆ.2ರೊಳಗೆ ಡೆಲ್ಲಿ ಪಡೆ ಸೇರಲಿರುವ ರಬಾಡ
ಐಪಿಎಲ್ 2020

ಹೊಸದಿಲ್ಲಿ, ಆ.30: ಇಂಡಿಯನ್ ಪ್ರೀಮಿಯರ್ ಲೀಗ್‌ನ 2019ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 12 ಪಂದ್ಯಗಳಲ್ಲಿ 25 ವಿಕೆಟ್ ಉಡಾಯಿಸಿದ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಕಗಿಸೊ ರಬಾಡ ಸೆಪ್ಟೆಂಬರ್ 2ರೊಳಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಲಿದ್ದಾರೆ.
ಭಾರತದ ಕ್ರಿಕೆಟಿಗರಾದ ಶಿಖರ್ ಧವನ್, ರಿಷಭ್ ಪಂತ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ಸಿನಲ್ಲಿ ರಬಾಡ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ -20 ಸರಣಿಯಲ್ಲಿ ರಬಾಡ ಕೊನೆಯ ಬಾರಿ ಆಡಿದ್ದರು. ಬಳಿಕ ತೊಡೆಸಂದು ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು.
ರಬಾಡ ಕೋವಿಡ್-19ಗಾಗಿ ಮೂರು ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ನಂತರ ಅವರು ತರಬೇತಿಯನ್ನು ಪುನರಾರಂಭಿಸುವ ಮೊದಲು ಒಂದು ವಾರದ ಕ್ವಾರಂಟೈನ್‌ನಲ್ಲಿ ಉಳಿಯಲಿದ್ದಾರೆ.
ಶನಿವಾರ ದುಬೈನ ಐಸಿಸಿ ಅಕಾಡಮಿಯಲ್ಲಿ ಡೆಲ್ಲಿ ತನ್ನ ಮೊದಲ ಅಭ್ಯಾಸವನ್ನು ಆರಂಭಿಸಲಿದೆ.
Next Story





