ಬೈಕ್ ಅಪಘಾತ: ಮೀನುಗಾರ ಮೃತ್ಯು
ಮಲ್ಪೆ, ಆ.31: ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮುಗಿಸಿ ಬೈಕಿನಲ್ಲಿ ಹೋಗುತ್ತಿದ್ದ ಮೀನುಗಾರರೊಬ್ಬರು ಅಪಘಾತದಿಂದ ಮೃತಪಟ್ಟ ಘಟನೆ ಆ.30ರಂದು ಮಲ್ಪೆ ಕೊಳ ರಸ್ತೆಯ ಕಾರ್ತಿಕ್ ಫಿಶರಿಸ್ ಮೀನು ಫ್ಯಾಕ್ಟರಿಯ ಎದುರು ನಡೆದಿದೆ.
ಮೃತರನ್ನು ಕಲ್ಮಾಡಿ ನಿವಾಸಿ ಸತೀಶ್ ಕೋಟ್ಯಾನ್(46) ಎಂದು ಗುರುತಿಸ ಲಾಗಿದೆ. ಬೆಳಗ್ಗೆ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕ್ ರಸ್ತೆಯ ಅಂಚಿಗೆ ಬಿದ್ದ ಪರಿಣಾಮ ಪಲ್ಟಿಯಾಯಿತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸತೀಶ್, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5:30ರ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





