‘ತನಾಫುಸ್’ ರಾಜ್ಯಮಟ್ಟದ ಸ್ಪರ್ಧೆ: ಕೊಡಗು ಜಿಲ್ಲೆ ಪ್ರಥಮ
ಉಡುಪಿ, ಆ.31: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಹಮ್ಮಿಕೊಂಡಿರುವ ರಾಜ್ಯಮಟ್ಟದ ತನಾಫುಸ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆ ಪ್ರಥಮ, ದ.ಕ ಪಶ್ಚಿಮ ದ್ವಿತೀಯ ಹಾಗೂ ಹಾಸನ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳು ತೃತೀಯ ಸ್ಥಾನ ವನ್ನು ಗೆದ್ದುಕೊಂಡಿದೆ.
ಕನ್ನಡ ಭಾಷಣ ಸ್ಪರ್ಧೆ: ಪ್ರ- ಆಸಿಫ್ ಹಾಸನ, ದ್ವಿ-ಸಲಾಹುದ್ದೀನ್ ದ.ಕ. ವೆಸ್ಟ್. ಇಂಗ್ಲಿಷ್ ಭಾಷಣ: ಪ್ರ- ಮುಹಮ್ಮದ್ ಶಫೀಕ್ ಕೊಡಗು, ದ್ವಿ- ಮುಹಮ್ಮದ್ ಮುಈನುದ್ದೀನ್ ದಕ ಈಸ್ಟ್. ಉರ್ದು ಭಾಷಣ: ಪ್ರ- ಅಬ್ದುಸ್ಸಮದ್ ತುಮಕೂರು, ದ್ವಿ- ಸುಫಿಯಾನ್ ಕೊಡಗು. ಚರ್ಚಾ ಸ್ಪರ್ಧೆ: ಪ್ರ- ಸಲಾಹುದ್ದೀನ್ ದಕ ವೆಸ್ಟ್, ದ್ವಿ- ಶರೀಫ್ ಎಂಪಿ ಕೊಡಗು. ಮ್ಯಾಗಝೀನ್ ಸ್ಪರ್ಧೆ: ಪ್ರ- ಹಾಫಿಳ್ ಕಬೀರ್ ಶಿವಮೊಗ್ಗ, ದ್ವಿ- ಅಹ್ಮದ್ ಫಸೀಹ್ ದಕ ವೆಸ್ಟ್. ಕ್ವಿಝ್: ಪ್ರ- ಮುಹಮ್ಮದ್ ಸಾಲಿಕ್ ಕೊಡಗು, ದ್ವಿ- ಮುಹಮ್ಮದ್ ಅಶ್ರಫ್ ದಕ ಈಸ್ಟ್.
ಆ.30ರಂದು ಆನ್‌ಲೈನ್‌ನಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ಮದನಿ ವಹಿಸಿದ್ದರು. ಕೆಸಿಎಫ್ ಅಂತಾರಾಷ್ಟ್ರಿಯ ಸಮಿತಿ ಅಧ್ಯಕ್ಷ ಡಾ.ಶೈಖ್ ಬಾವ ಹಾಜಿ ಅಬುಧಾಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಕರ್ನಾಟಕ ಪ್ರಥಮ ಅಧ್ಯಕ್ಷ ಯೂಸುಫ್ ಸಅದಿ ಅಯ್ಯಂಗೇರಿ ಸಂದೇಶ ಭಾಷಣ ಮಾಡಿದರು. ಮುಖ್ಯ ತೀರ್ಪುಗಾರ ರಾಜ್ಯ ಎಸ್.ವೈ.ಎಸ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಜಿ.ಎಂ ಮುಹಮ್ಮದ್ ಕಾಮಿಲ್ ಸಾಫಿ ಅವಲೋಕನ ಭಾಷಣ ಮಾಡಿದರು.
ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ, ಇಸ್ಹಾಖ್ ಝುಹ್ರಿ ಸೂರಿಂಜೆ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಹಸೈನಾರ್ ಆನೆಮಹಲ್, ಇಕ್ಬಾಲ್ ಕಾಜೂರು ಶುಭ ಹಾರೈಸಿದರು. ರಾಜ್ಯ ಕೋಶಾಧಿ ಕಾರಿ ರವೂಫ್ ಖಾನ್, ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ, ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಸಖಾಫಿ, ಮುಬಶ್ಶಿರ್ ಅಹ್ಸನಿ, ವಾಜಿದ್ ಹಾಸನ ರಹೀಮ್ ಕಾರ್ಕಳ, ಹಕೀಮ್ ಬೆಂಗಳೂರು ಉಪಸ್ಥಿತರಿದ್ದರು.
ರಾಜ್ಯ ದಅ್ವಾ ಕಾರ್ಯದರ್ಶಿ ಪಿಎಂಎ ಅಶ್ರಫ್ ರಝಾ ಅಂಜದಿ ಸ್ವಾಗತಿಸಿ ದರು. ರಾಜ್ಯ ಮೀಡಿಯಾ ಕಾರ್ಯದರ್ಶಿ ನವಾಝ್ ಭಟ್ಕಳ್ ವಂದಿಸಿದರು. ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿದರು.







