ಬಜ್ಪೆ ಪಿಡಿಒ ವರ್ಗಾವಣೆ ರದ್ದತಿಗೆ ಎಸ್ಡಿಪಿಐ ಆಗ್ರಹ, ಮನವಿ
ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಜ್ಪೆ ಗ್ರಾಮ ಸಮಿತಿ ವತಿಯಿಂದ ಬಜ್ಪೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವರ್ಗಾವಣೆ ರದ್ದುಗೊಳಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಬಜ್ಪೆ ಗ್ರಾಮ ಪಂಚಾಯತ್ ಅಡಳಿತಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಎಸ್ ಡಿಪಿಐ ಬಜ್ಪೆ ಗ್ರಾಮ ಸಮಿತಿಯ ಅಧ್ಯಕ್ಷರಾದ ನಝೀರ್ ಕೆ.ಪಿ., ಸಮಿತಿ ಸದಸ್ಯ ಮನ್ಸೂರ್ ಕೆ.ಪಿ., ಕಾರ್ಯಕರ್ತರಾದ ಸುಹೈಲ್, ಫಾರೂಕ್, ನೌಶಾದ್ ಮತ್ತು ಇಮ್ರಾನ್ ಉಪಸ್ಥಿತರಿದ್ದರು.
Next Story